More

    ನರೇಗಾ ಯೋಜನೆ ಸದ್ಬಳಕೆಯಾಗಲಿ

    ಯಲಬುರ್ಗಾ: ನರೇಗಾ ಯೋಜನೆಯಡಿ ಜಮೀನು ಇರುವ ರೈತರು ವೈಯಕ್ತಿಕ ಕಾಮಗಾರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.

    ಇದನ್ನೂ ಓದಿ: ನರೇಗಾ ಕೆಲಸದ ಸ್ಥಳದಲ್ಲಿ ಸೌಕರ್ಯ ಕಲ್ಪಿಸಿ

    ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ನರೇಗಾದಡಿ ಆರಂಭವಾಗಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಹಾಗೂ ಸ್ವೀಪ್ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದ ಅಂಗವಾಗಿ ಎರಡು ತಿಂಗಳ ನಿರಂತರ ಕೆಲಸ ನೀಡಲಾಗುವುದು. ಕೂಲಿಕಾರರು ಸದುಪಯೋಗ ಪಡೆಯಬೇಕು. ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು.

    ಕಳೆದ ಚುನಾವಣೆಯಲ್ಲಿ ನಿರಂತರ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಶೇ.2ರಷ್ಟು ಹೆಚ್ಚಿನ ಮತದಾನವಾಗಿತ್ತು. ಈ ಬಾರಿಯೂ ಸಂಗನಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಮತದಾನವಾಗಬೇಕು ಎಂದರು.

    ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಸರ್ವಮಂಗಳ, ಕರವಸೂಲಿಗಾರ ಶರಣಪ್ಪ, ಬಿಎಫ್‌ಟಿ ಶಿವಪ್ಪ ಸೂಡಿ ಇತರರಿದ್ದರು.

    See also  ಕೊಡಗು ಪತ್ರಕರ್ತರ ಸಂಘದಿಂದ ಸೌಹಾರ್ದ ಕ್ರಿಕೆಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts