More

    ನರೇಗಾ ಕೆಲಸದ ಸ್ಥಳದಲ್ಲಿ ಸೌಕರ್ಯ ಕಲ್ಪಿಸಿ

    ಕಲಬುರಗಿ: ಬಿಸಿಲಿನ ತಾಪ ಹೆಚ್ಚಾಗಿದ್ದು, ಕೂಲಿ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಕುಡಿಯುವ ನೀರು, ನೆರಳು (ಟೆಂಟ್) ಮತ್ತು ಆರೋಗ್ಯ ಕಿಟ್ ವ್ಯವಸ್ಥೆ ಮಾಡಬೇಕು ಎಂದು ಕಾಳಗಿ ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಂಯೋಜಕಿ ಜ್ಯೋತಿ ಸಾಗರ ಹೇಳಿದರು.

    ಕಾಳಗಿ ತಾಲೂಕಿನ ಚಿಂಚೋಳಿ (ಎಚ್) ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಾದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಗಂಡೋರಿ ನಾಲಾದ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಬಿಸಿಲು ಹೆಚ್ಚಿದ್ದು, ನರೇಗಾದಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಬೇಸಿಕ್ ಸೌಕರ್ಯ ಕಲ್ಪಿಸಲು ಗ್ರಾಪಂಗಳಿಗೆ ಸರ್ಕಾರ ನಿರ್ದೇಶನ ನೀಡಿದೆ ಎಂದರು.

    ಹಿರಿಯ ನಾಗರೀಕರು, ವಿಶೇಷ ಚೇತನರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈಗಾಗಲೇ ಕೆಲಸದ ಪ್ರಮಾಣದಲ್ಲಿ ಶೇ.೫೦ ರಿಯಾಯಿತಿ ನೀಡಲಾಗಿದೆ. ಇದೀಗ ಬಿಸಿಲಿನ ತಾಪದಿಂದಾಗಿ ಸರ್ಕಾರ ಏಪ್ರಿಲ್‌ನಿಂದ ಮೇ ತಿಂಗಳ ಅಂತ್ಯದವರೆಗೆ ಶೇ.೩೦ ಮತ್ತು ಜೂನ್‌ನಿಂದ ಶೇ.೨೦ ರಿಯಾಯಿತಿ ನೀಡಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಲಿ ದರ ಪರಿಷ್ಕರಣೆ ಮಾಡಿದ್ದು, ಏಪ್ರಿಲ್‌ನಿಂದಲೇ ೩೪೯ ರೂ. ಸಿಗಲಿದೆ. ಇದರ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.

    ಗ್ರಾಮ ಪಂಚಾಯಿತಿ ಡಿಇಒ ಸುರೇಶ ಕಟ್ಟಿಮನಿ, ಬಿಎಫ್‌ಟಿ ಶಾಂತಕುಮಾರ, ಕಾಯಕ ಬಂಧುಗಳಾದ ಸುರೇಖಾ ಸುಗಾರ, ಯಶೋಧಾ, ಅಂಬರೀಶ, ಶಿವರಾಮ, ಮಮತಾ ಪೂಜಾರಿ, ರೇವಣಸಿದ್ದಪ್ಪ ಕಲ್ಲಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts