More

    ಸಮನ್ವಯದಿಂದ ಕಾರ್ಯ ನಿರ್ವಹಿಸಿ

    ಬಳ್ಳಾರಿ: ಚುನಾವಣೆ ನಡೆಸಲು ಒಳಗೊಂಡಿರುವ ವಿವಿಧ ತಂಡಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಎಂದು ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ ಹೇಳಿದರು.

    ನಗರದ ಜಿಪಂ ಸಭಾಂಗಣದಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನಲೆ ಚುನಾವಣೆ ಸಿದ್ಧತೆ ಕುರಿತು ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡೆಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಮತಗಟ್ಟೆ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಸಿದ್ದತೆಗಳನ್ನು ಖಚಿತಪಡಿಸಿಕೊಳ್ಳಬೇಕು. ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸಲು ಇನ್ನೂ ಸಾಕಷ್ಟು ಕಾಲಾವಕಾಶ ನಿಮ್ಮಲ್ಲಿ ಇದೆ. ಅಕ್ರಮ ಹಣ ಅಥವಾ ಸಾಮಗ್ರಿಗಳನ್ನು ಯಾವ ಯಾವ ರೀತಿಯಲ್ಲಿ ಸಾಗಿಸಬಹುದು ಎಂಬುದರ ಬಗ್ಗೆ ತಪಾಸಣಾ ಸಿಬ್ಬಂದಿಗಳಿಗೂ ತಿಳಿದಿರಬೇಕು. ಕೇವಲ ನೆಪ ಮಾತ್ರಕ್ಕೆ ತಪಾಸಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

    ಡಿಸಿ ಪ್ರಶಾಂತ ಕುಮಾರ್ ಮಿಶ್ರಾ ಮಾತನಾಡಿ, ಸಂಶಯದ ಆಧಾರದಲ್ಲಿ ಪತ್ತೆಯಾದ ಆರು ಕೋಟಿ ರೂ. ಅಧಿಕ ನಗದು, ಹತ್ತು ಲಕ್ಷ ರೂ. ಮೌಲ್ಯದ 2456 ಲೀ. ಮದ್ಯ, 54 ಸಾವಿರ ರೂ. ಮೌಲದ್ಯ ಡ್ರಗ್ಸ್, 1.53 ಕೋಟಿ ರೂ. ಮೌಲ್ಯದ ಚಿನ್ನಭರಣ, 39 ಲಕ್ಷ ರೂ. ಮೌಲ್ಯದ ಕುಕ್ಕರ್ ಸೀರೆ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡು 429 ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಎಸ್ಪಿ ರಂಜಿತ್ ಕುಮಾರ ಬಂಡಾರು ಮಾತನಾಡಿ, ಎಂಸಿಸಿ ಉಲ್ಲಂಘನೆದಂತೆ ಇಲ್ಲಿಯವರೆಗೆ ಒಟ್ಟು 25 ಪ್ರಕರಣ ದಾಖಲಾಗಿವೆ. ಪೊಲೀಸ್, ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ಅಧಿಕಾರಿಗಳಿಂದ 58, ಅಬಕಾರಿ ಇಲಾಖೆಯಿಂದ 267 ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts