ಯುಎಸ್​ ಓಪನ್​ನಲ್ಲಿ ಮೊದಲ ಪಂದ್ಯ ಗೆದ್ದಾಗಲೇ ಜೋಕೊವಿಕ್​ಗೆ ಒಲಿದ ವಿಶ್ವ ನಂ. 1 ಪಟ್ಟ!

joko web
Published on

ನ್ಯೂಯಾರ್ಕ್​: ಸೆರ್ಬಿಯಾದ ತಾರೆ ನೊವಾಕ್​ ಜೋಕೊವಿಕ್​ ಯುಎಸ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿಗೆ ಗೆಲುವಿನ ಪುನರಾಗಮನ ಕಂಡಿದ್ದಾರೆ. ಜತೆಗೆ ಟೂರ್ನಿಯ ನಂತರದಲ್ಲಿ ಮರಳಿ ವಿಶ್ವ ನಂ. 1 ಪಟ್ಟಕ್ಕೇರುವುದನ್ನೂ ಖಚಿತಪಡಿಸಿಕೊಂಡಿದ್ದಾರೆ.

2ನೇ ಶ್ರೇಯಾಂಕಿತ ಜೋಕೊವಿಕ್​ ಟೂರ್ನಿಯ ಮೊದಲ ದಿನವಾದ ಸೋಮವಾರ ನಡೆದ ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್​ನ ಅಲೆಕ್ಸಾಂಡ್ರೆ ಮುಲ್ಲರ್​ ವಿರುದ್ಧ 6-0, 6-2, 6-3 ನೇರಸೆಟ್​ಗಳಿಂದ ಗೆಲುವು ಸಾಧಿಸಿದರು. ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕಾಗಿ ಕಳೆದ ವರ್ಷದ ಟೂರ್ನಿಗೆ ಅಮೆರಿಕಕ್ಕೆ ಪ್ರವೇಶ ಸಿಗದ ಕಾರಣ ಆಡಿರದಿದ್ದ ಜೋಕೊವಿಕ್​, ಈ ಬಾರಿ 23 ನಿಮಿಷಗಳಲ್ಲೇ ಮೊದಲ ಸೆಟ್​ ಗೆದ್ದು ಭರ್ಜರಿ ಪುನರಾಗಮನ ಕಂಡರು.

ಕಳೆದ ವರ್ಷ ಆಡದ ಕಾರಣ ಯಾವುದೇ ರ್ಯಾಂಕಿಂಗ್​ ಅಂಕ ರಕ್ಷಿಸಿಕೊಳ್ಳಲು ಇರದ ಕಾರಣ ಜೋಕೋ, 2ನೇ ಸುತ್ತಿಗೇರಿದ ಬೆನ್ನಲ್ಲೇ, ಟೂರ್ನಿಯ ನಂತರ ವಿಶ್ವ ನಂ. 1 ಪಟ್ಟಕ್ಕೆ ಮರಳುವುದು ಖಚಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net