

ನವದೆಹಲಿ: ಡಬ್ಲ್ಯುಡಬ್ಲ್ಯುಇ ಸೂಪರ್ಸ್ಟಾರ್ ಜಾನ್ ಸೀನಾ ಭಾರತದಲ್ಲಿ ಸ್ಪರ್ಧಿಸಲು ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್ 6ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಡಬ್ಲ್ಯುಡಬ್ಲ್ಯುಇ ಸೂಪರ್ಸ್ಟಾರ್ ಸ್ಪೆಕ್ಟಾಕಲ್ ಇವೆಂಟ್ನಲ್ಲಿ 16 ಬಾರಿಯ ವಿಶ್ವ ಚಾಂಪಿಯನ್ ಜಾನ್ ಸೀನಾ ಕುಸ್ತಿ ಕಣಕ್ಕಿಳಿಯಲಿದ್ದಾರೆ.
ಕೂಟದಲ್ಲಿ ಸೀನಾಗೆ ವಿಶ್ವ ಹೆವಿವೇಟ್ ಚಾಂಪಿಯನ್ ಸೆತ್ ರೋಲಿನ್ಸ್ ಸಾಥ್ ನೀಡಲಿದ್ದು, ಇವರಿಬ್ಬರು ಜತೆಯಾಗಿ ಲುಡ್ವಿಗ್ ಕೈಸರ್ ಮತ್ತು ಗಿಯೋವನ್ನಿ ವಿನ್ಸಿ ವಿರುದ್ಧ ಸೆಣಸಲಿದ್ದಾರೆ. ಈಗಾಗಲೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಜಾನ್ ಸೀನಾ, ಭಾರತದಲ್ಲಿ ಮೊದಲ ಬಾರಿಗೆ ಫೈಟ್ ಮಾಡಲಿದ್ದಾರೆ.
46 ವರ್ಷದ ಜಾನ್ ಸೀನಾ, ಭಾರತದಲ್ಲಿ ಸ್ಪರ್ಧಿಸುವುದಕ್ಕೆ ಮುನ್ನ ತವರು ನೆಲ ಅಮೆರಿಕದಲ್ಲಿ ಸೆಪ್ಟೆಂಬರ್ 1ರಂದು ಸ್ಮ್ಯಾಕ್ಡೌನ್ ಇವೆಂಟ್ನಲ್ಲೂ ಭಾಗವಹಿಸಲಿದ್ದಾರೆ. ಇದಕ್ಕೆ ಮುನ್ನ ಏಪ್ರಿಲ್ನಲ್ಲಿ ಕೊನೆಯದಾಗಿ ಅವರು ಡಬ್ಲ್ಯುಡಬ್ಲ್ಯುಇ ಕಣಕ್ಕಿಳಿದಿದ್ದರು.