ಚೀನಾದೊಂದಿಗಿನ ಸಮಸ್ಯೆ ಬಗೆಹರಿಸಲು ಮೂರನೇಯವರ ಹಸ್ತಕ್ಷೇಪ ಅಗತ್ಯವಿಲ್ಲ; ಸಚಿವ ಎಸ್.ಜೈಶಂಕರ್

ಟೋಕಿಯೊ: ಚೀನಾ ಜತೆಗಿನ ಗಡಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತ ಮತ್ತು ಚೀನಾ ನಡುವಿನ ನೈಜ ಸಮಸ್ಯೆಯನ್ನು ಪರಿಹರಿಸಲು ನಾವು ಇತರ ದೇಶಗಳತ್ತ ನೋಡುತ್ತಿಲ್ಲ. ನಮಗೆ ಚೀನಾದೊಂದಿಗೆ ಸಮಸ್ಯೆ ಇದೆ ಮತ್ತು ನಾವಿಬ್ಬರೂ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸೋಮವಾರ(ಜುಲೈ 29) ಹೇಳಿದ್ದಾರೆ.

ಇದನ್ನು ಓದಿ: ಅಬಕಾರಿ ನೀತಿ ಹಗರಣದ ಸೂತ್ರಧಾರಿ ಸಿಎಂ ಕೇಜ್ರಿವಾಲ್​; ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ

ನಿಸ್ಸಂಶಯವಾಗಿ, ಪ್ರಪಂಚದ ಇತರ ದೇಶಗಳು ಈ ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುತ್ತೇವೆ. ಏಕೆಂದರೆ ನಾವು ಎರಡು ದೊಡ್ಡ ದೇಶಗಳು ಮತ್ತು ನಮ್ಮ ಸಂಬಂಧದ ಸ್ಥಿತಿಯು ಪ್ರಪಂಚದ ಉಳಿದ ಭಾಗಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ನಮ್ಮ ನಡುವಿನ ಸಮಸ್ಯೆ ಏನೆಂಬುದನ್ನು ಪರಿಹರಿಸಲು ಇತರ ದೇಶಗಳತ್ತ ನಾವು ನೋಡುತ್ತಿಲ್ಲ ಎಂದು ಅವರು ಹೇಳಿದರು.

ನಮ್ಮ ಅನುಭವದ ಆಧಾರದ ಮೇಲೆ ನಾವು ಚೀನಾದ ಬಗ್ಗೆ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಚೀನಾದೊಂದಿಗಿನ ನಮ್ಮ ಸಂಬಂಧಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದಕ್ಕೆ ಕಾರಣ 2020ರಲ್ಲಿ ಕರೊನಾ ಸಮದಯಲ್ಲಿ ಚೀನಾದೊಂದಿಗೆ ನಾವು ಮಾಡಿಕೊಂಡಿದ್ದ ಒಪ್ಪಂದಗಳನ್ನು ಉಲ್ಲಂಘಿಸಿ ಚೀನಾ, ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶಗಳಿಗೆ ತನ್ನ ಪಡೆಗಳನ್ನು ತಂದಿತು ಮತ್ತು ಅದು ಉದ್ವಿಗ್ನತೆಯನ್ನು ಸೃಷ್ಟಿಸಿತು. ಇದು ಘರ್ಷಣೆಗೆ ಕಾರಣವಾಗಿ ಎರಡೂ ಕಡೆಯ ಜನರು ಮೃತಪಟ್ಟರು ಎಂದು ಹೇಳಿದರು.

ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸದ ಕಾರಣ ಅದರ ಪರಿಣಾಮಗಳು ಮುಂದುವರಿಯುತ್ತವೆ. ಚೀನಾದೊಂದಿಗೆ ಇದೀಗ ಸಂಬಂಧ ಉತ್ತಮವಾಗಿಲ್ಲ. ನೆರೆಹೊರೆಯವರಾಗಿ ನಾವು ಉತ್ತಮ ಸಂಬಂಧಕ್ಕಾಗಿ ಆಶಿಸುತ್ತೇವೆ. ಆದರೆ ಅವರು ಎಲ್ಒಸಿಯನ್ನು ಗೌರವಿಸಿದರೆ ಮತ್ತು ಅವರು ಹಿಂದೆ ಸಹಿ ಮಾಡಿದ ಒಪ್ಪಂದಗಳನ್ನು ಗೌರವಿಸಿದರೆ ಮಾತ್ರ ಅದು ಸಂಭವಿಸುತ್ತದೆ ಎಂದು ತಿಳಿಸಿದರು.

ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಜಪಾನ್‌ನ ವಿದೇಶಾಂಗ ಸಚಿವ ಯೊಕೊ ಕಾಮಿಕಾವಾ ಮತ್ತು ಆಸ್ಟ್ರೇಲಿಯಾದ ಪೆನ್ನಿ ವಾಂಗ್ ಅವರೊಂದಿಗೆ ‘ಕ್ವಾಡ್’ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಟೋಕಿಯೊದಲ್ಲಿದ್ದಾರೆ.(ಏಜೆನ್ಸೀಸ್​)

ಕರೊನಾಗೆ ಕೊರೊನಿಲ್ ಔಷಧಿ; ಹೇಳಿಕೆ ತೆಗೆಯುವಂತೆ ರಾಮದೇವ್​​​​ಗೆ ದೆಹಲಿ ಕೋರ್ಟ್​​ ಸೂಚನೆ

Share This Article

ನೀವು 1 ತಿಂಗಳ ಕಾಲ ಬೆಳಗಿನ ತಿಂಡಿ ತಿನ್ನುವುದನ್ನ ಬಿಟ್ಟರೆ ಏನಾಗುತ್ತದೆ? ಪ್ರತಿಯೊಬ್ಬರೂ ಇದನ್ನ ತಿಳಿದಿರಲೇಬೇಕು..Health Tips

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ಸಮಯದ ಅಭಾವ ಹಾಗೂ ಇನ್ನಿತರ ಕಾರಣಗಳಿಂದಾಗಿ ಅನೇಕರು ಬೆಳಗಿನ ಉಪಾಹಾರವನ್ನು…

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…