ಈ 3 ಗುಂಪಿನ ಜನರು ಯಾವುದೇ ಕಾರಣಕ್ಕೂ ಕಾಫಿ ಕುಡಿಯುವಂತಿಲ್ಲ! ಕುಡಿದ್ರೆ ಅಪಾಯ ಗ್ಯಾರಂಟಿ

Coffee Health
Published on

ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ಯಾವಾಗಿಂದ ಶುರುವಾಯಿತು ಎಂದು ಕೇಳಿದರೆ, ಬಹುತೇಕರಿಗೆ ಉತ್ತರ ಗೊತ್ತಿಲ್ಲ. ಇದು ಪೂರ್ವಜರಿಂದ ಬಂದ ಒಂದು ಅಭ್ಯಾಸ ಎಂದೇ ಹೇಳುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿಯಿಂದ ದಿನವನ್ನು ಶುರುಮಾಡಿ ರಾತ್ರಿ ಕಾಫಿಯೊಂದಿಗೆ ದಿನ ಮುಗಿಸುವವರಿದ್ದಾರೆ.

ಪ್ರತಿದಿನ ಒಂದಲ್ಲ ಎರಡಲ್ಲ 4ರಿಂದ 5 ಕಾಫಿ ಕುಡಿಯುವವರೂ ಇದ್ದಾರೆ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಊಟ ಇಲ್ಲದಿದ್ದರೂ ಪರವಾಗಿಲ್ಲ ಆದರೆ, ಕಾಫಿ ಅಥವಾ ಟೀ ಬೇಕೆ ಬೇಕು.

ಆರೋಗ್ಯ ತಜ್ಞರ ಪ್ರಕಾರ, ಕಾಫಿಗೆ ಟೈಪ್ 2 ಮಧುಮೇಹ, ಖಿನ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ. ಆದಾಗ್ಯೂ, ಕಾಫಿ ಎಲ್ಲರಿಗೂ ಸೂಕ್ತವಲ್ಲ. ಕಾಫಿಯಲ್ಲಿರುವ ಮುಖ್ಯ ಅಂಶವಾದ ಕೆಫೀನ್ ಕೆಲವರಿಗೆ ವಿಲನ್ ಆಗಿಯು ಕೆಲಸ ಮಾಡುತ್ತದೆ.

ಮುಖ್ಯವಾಗಿ ಮೂರು ಗುಂಪಿನ ಜನರಲ್ಲಿ ಕಾಫಿ ಒಂದು ಸಮಸ್ಯೆಯಾಗಿದೆ. ಅವರು ಯಾರೆಂದು ನೋಡೋಣ.

1. ನಿದ್ರಾಹೀನತೆಯಿಂದ ಬಳಲುತ್ತಿರುವವರು

ನಿದ್ರಾಹೀನತೆಯಿಂದ ಬಳಲುತ್ತಿರುವವರು ಯಾವುದೇ ಸಂದರ್ಭದಲ್ಲಿ ಕಾಫಿ ಕುಡಿಯಬಾರದು. ಏಕೆಂದರೆ ಕಾಫಿ ಸೇವನೆಯು ಸಹಜ ನಿದ್ರೆಗೆ ಭಂಗ ತರುತ್ತದೆ. ಕಾಫಿಗಾಗಿ ಕಡುಬಯಕೆ ಇದ್ದರೆ, ಮಲಗುವ ಸಮಯಕ್ಕೆ ಗಂಟೆಗಳ ಮೊದಲು ಕಾಫಿ ಸೇವಿಸುವುದು ಒಳ್ಳೆಯದು. ಏಕೆಂದರೆ ಮೆದುಳಿಗೆ ನಿದ್ರೆಯನ್ನು ಉಂಟುಮಾಡಲು ಅನುವು ಮಾಡಿಕೊಡುವ ಅಡೆನೊಸಿನ್ ಅಂಶವನ್ನು ಕೆಫೀನ್ ತಟಸ್ಥಗೊಳಿಸುತ್ತದೆ.

2. ಕಡಿಮೆ ಚಯಾಪಚಯ ಹೊಂದಿರುವವರು

ಕಡಿಮೆ ಚಯಾಪಚಯ ಹೊಂದಿರುವ ಜನರು ಚಹಾ ಮತ್ತು ಕಾಫಿಯನ್ನು ತ್ಯಜಿಸಬೇಕು. ಅದು ಸಾಧ್ಯವಾಗದಿದ್ದರೆ ಒಮ್ಮೆ ಪ್ರಯತ್ನಿಸಿ. ಬೆಳಗ್ಗೆ ಕುಡಿಯುವುದನ್ನು ನಿರ್ಬಂಧಿಸಿ. ಏಕೆಂದರೆ, ಕೆಫೀನ್ ಇರುವ ಪಾನೀಯಗಳು ದೇಹಕ್ಕೆ ವಿಟಮಿನ್ ಗಳನ್ನು ಹೀರಿಕೊಳ್ಳುವುದನ್ನು ತಡೆಯಬಹುದು. ಇದು ಆಮ್ಲೀಯತೆ ಮತ್ತು ಹೊಟ್ಟೆಯ ಉಬ್ಬುವಿಕೆಗೆ ಕಾರಣವಾಗುತ್ತದೆ.

3. ಹೆಚ್ಚಿನ ಆತಂಕ ಹೊಂದಿರುವ ಜನರು

ಆತಂಕದ ಸಮಸ್ಯೆ ಇರುವವರಿಗೂ ಕಾಫಿ ಒಳ್ಳೆಯದಲ್ಲ. ಅನಿಯಮಿತ ಹೃದಯ ಬಡಿತ ಮತ್ತು ಹೆದರಿಕೆಯಿಂದ ಬಳಲುತ್ತಿರುವವರು ಕಾಫಿಯನ್ನು ಸಹ ತ್ಯಜಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net