ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಿದ್ರೂ ಬಂತು ಪಾಸಿಟಿವ್ ರಿಪೋರ್ಟ್!

corona lab test
Published on

ಬಾಗಲಕೋಟೆ: ಆ ಪೊಲೀಸ್ ಪೇದೆ ಕರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿಯೇ ಇಲ್ಲ. ಆದರೂ ಅವರ ಮೊಬೈಲ್​ಗೆ ಬಂದ ಕರೆಯೊಂದು, 'ನಿಮ್ಮ ವರದಿ ಪಾಸಿಟಿವ್​ ಬಂದಿದೆ, ಕೋವಿಡ್​ ಆಸ್ಪತ್ರೆಗೆ ದಾಖಲಾಗಲು ಬೇಗ ತಯಾರಿ ಮಾಡಿಕೊಳ್ಳಿ' ಅಂದ್ರೆ ಹೇಗಾಗಬೇಡ?

ಕೋವಿಡ್​ ಹೆಸರು ಕೇಳಿದ್ರೇನೇ ಜನರು ಮಾರುದ್ದ ಓಡಿಹೋಗ್ತಾರೆ. ಅಂತಹದ್ದರಲ್ಲಿ ಕರೊನಾ ಪರೀಕ್ಷೆಗೆ ಮಾಡಿಸಿಕೊಳ್ಳದ ಪೊಲೀಸ್​ ಪೇದೆಯೊಬ್ಬರಿಗೆ, 'ನಿಮ್ಮಿಂದ ಸಂಗ್ರಹಿಸಿದ್ದ ಗಂಟಲು ದ್ರವ ಮಾದರಿಯ ವರದಿ ಪಾಸಿಟಿವ್​ ಬಂದಿದೆ' ಎಂದು ಸ್ವತಃ ಆರೋಗ್ಯ ಸಿಬ್ಬಂದಿಯೇ ಹೇಳಿದ್ದಾರೆ. ವಿಷಯ ಕೇಳಿದ ಪೇದೆ ಬೆಚ್ಚಿದ್ದಾರೆ. ಅಂದಹಾಗೆ ಈ ಕಾಲ್​ ಬಂದದ್ದು ಬಾಗಲಕೋಟೆ ಗ್ರಾಮೀಣ ಠಾಣೆಯ 54 ವರ್ಷದ ಪೇದೆಗೆ.

ಕರೊನಾ ಪರೀಕ್ಷೆಗೆ ಮಾಡಿಸಿಕೊಳ್ಳಲೆಂದು ಗ್ರಾಮೀಣ ಠಾಣೆಯ ಮೂವರು ಪೊಲೀಸ್​ ಸಿಬ್ಬಂದಿ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಒಪಿಡಿ ಚೀಟಿ ಬರೆಸಿದ್ದರು. ವಿಳಂಬ ಆಗಿದ್ದಕ್ಕೆ ಸ್ವ್ಯಾಬ್ ಕೊಡದೇ ವಾಪಸ್​ ಬಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದು, ಬೇರೆ ಯಾರದ್ದೋ ಸ್ವ್ಯಾಬ್​ ಸಂಗ್ರಹಿಸಿ ಅದನ್ನು ಆ ಮೂವರು ಪೊಲೀಸ್​ ಸಿಬ್ಬಂದಿ ಪೈಕಿ ಒಬ್ಬ ಪೇದೆ ಹೆಸರನ್ನು ಹಾಕಿಬಿಟ್ಟಿದ್ದಾರೆ. ವಾಸ್ತವದಲ್ಲಿ ಆ ಸಿಬ್ಬಂದಿ ಗಂಟಲ ದ್ರವ ಮಾದರಿಯನ್ನು ಕೊಟ್ಟಿಯೇ ಇಲ್ಲ.

ಈಗ ದಿಢೀರನೇ ಒಬ್ಬ ಪೊಲೀಸ್​ಗೆ ಫೋನ್ ಮಾಡಿ, ನಿಮಗೆ ಪಾಸಿಟಿವ್ ಇದೆ. ಬೇಗ ಆಸ್ಪತ್ರೆಗೆ ದಾಖಲಾಗಿ ಎಂದಿದ್ದಾರೆ. ಸ್ವ್ಯಾಬ್ ಕೊಡದಿದ್ರೂ ಪಾಸಿಟಿವ್ ರಿಪೋರ್ಟ್ ಬಂದಿರುವುದನ್ನ ಕೇಳಿ ಪೇದೆಗೆ ಬಿಗ್ ಶಾಕ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net