ರಜಿನಿ ಮಕ್ಕಳ್​ ಮಂದ್ರಂ ಪಕ್ಷ ವಿಸರ್ಜನೆ: ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಅಂದ್ರು ರಜಿನಿಕಾಂತ್

Rajinikanth
Published on

ಚೆನ್ನೈ: ನಾನು ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ನಟ ರಜಿನಿಕಾಂತ್​, ತಮ್ಮ ರಜಿನಿ ಮಕ್ಕಳ್​ ಮಂದ್ರಂ (ಆರ್​ಎಂಎಂ) ಪಕ್ಷವನ್ನು ವಿಸರ್ಜಿಸಿದ್ದಾರೆ.

ಆರ್​ಎಂಎಂ ಇನ್ಮುಂದೆ ಅಭಿಮಾನಿಗಳ ಕಲ್ಯಾಣ ಸಂಘವಾಗಿ ಮುಂದುವರಿಯಲಿದೆ ಎಂದು ರಜಿನಿಕಾಂತ್​ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಸ್ತುತ ನನ್ನ ಆರೋಗ್ಯ ಸಮಸ್ಯೆ ಹಾಗೆಯೇ ಇರುವುದರಿಂದ ನಾವು ಏನನ್ನು ನಿರೀಕ್ಷಿಸಿದೆವೋ ಅದ ಸಂಭವಿಸುವುದಿಲ್ಲ. ಮತ್ತೊಮ್ಮೆ ರಾಜಕೀಯ ಪ್ರವೇಶಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ರಜಿನಿಕಾಂತ್​ ಹೇಳಿದ್ದಾರೆ.

ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿರುವುದಾಗಿ ಕಳೆದ ಡಿಸೆಂಬರ್​ನಲ್ಲೇ ರಜಿನಿಕಾಂತ್​ ಘೋಷಿಸಿದ್ದರು. 2016ರಲ್ಲಿ ರಜಿನಿಕಾಂತ್​ ಕಿಡ್ನಿ ಕಸಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಂದಿನಿಂದ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net