More

    ತೆರೆದ ಬಾವಿ ಯೋಜನೆಗೆ ಫುಲ್ ಡಿಮಾಂಡ್!; ನರೇಗಾ ಯೋಜನೆಯಡಿ 15 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಜನ-ಜಾನುವಾರು, ಕೃಷಿಗೆ ನೀರಿನ ಸಮಸ್ಯೆ ನೀಗಿಸುವ ಜತೆಯಲ್ಲೇ ಅಂತರ್ಜಲ ವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ‘ತೆರೆದ ಬಾವಿ’ ನಿರ್ಮಾಣ ಯೋಜನೆಗೆ ಬೇಡಿಕೆ ಹೆಚ್ಚಲಾರಂಭಿಸಿದೆ. ಈಗಾಗಲೇ ರಾಜ್ಯಾದ್ಯಂತ 4,500ಕ್ಕೂ ಅಧಿಕ ಬಾವಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ದೂರದ ನದಿಗಳಿಂದ ಪೈಪ್​ಲೈನ್ ಮೂಲಕ ನೀರು ತರುವುದು ವೆಚ್ಚದಾಯಕ. ಲಕ್ಷಾಂತರ ರೂ. ವೆಚ್ಚ ಮಾಡಿ ಕೊಳವೆ ಬಾವಿ ಕೊರೆಸುವುದೂ ಅಸಾಧ್ಯ. ಹೀಗಾಗಿ 2ರಿಂದ 5 ಎಕರೆಯೊಳಗೆ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ತೆರೆದ ಬಾವಿ ನಿರ್ವಣಕ್ಕೆ ಉತ್ಸುಕರಾಗಿದ್ದಾರೆ. ರಾಜ್ಯದ 6,002 ಗ್ರಾಪಂಗಳಲ್ಲಿ ಈವರೆಗೆ 15 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ.

    ನಿರ್ವಹಣೆ ಸಮಸ್ಯೆ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಮೈಸೂರು, ದಾವಣಗೆರೆ, ಹಾವೇರಿ, ಮಂಡ್ಯ, ಉ.ಕನ್ನಡ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಯ ಗ್ರಾಮಗಳು ಇಂದಿಗೂ ಕುಡಿಯುವ ನೀರಿಗೆ ತೆರೆದ ಬಾವಿಗಳನ್ನೇ ಅವಲಂಬಿಸಿವೆ. 1999ರಿಂದ 2004ರ ನಡುವಿನ ಅವಧಿಯಲ್ಲಿ ನೀರು ಸರಬರಾಜು ಯೋಜನೆಯಡಿ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ವಿುಸಿ ನೀರು ಪೂರೈಕೆ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಕೊಳವೆ ಬಾವಿಗಳ ನಿರ್ವಣ, ಜಲ ಸೆಲೆಗಳು ಕಡಿಮೆಯಾದ್ದರಿಂದ ತೆರೆದ ಬಾವಿ ನಿರ್ವಹಣೆಯಿಲ್ಲದೆ ಹಾಳಾಗಿವೆ.

    ನರೇಗಾದಡಿ ಅವಕಾಶ: ನರೇಗಾ ಯೋಜನೆಯಡಿ ಹೊಂಡದ ಮಾದರಿಯಲ್ಲಿ ತೆರೆದ ಬಾವಿ ನಿರ್ವಿುಸಲಾಗುತ್ತಿದೆ. ಮಳೆಗಾಲ ಸಂದರ್ಭದಲ್ಲಿ ಕಾಮಗಾರಿ ಆರಂಭಿಸುವುದರಿಂದ ಜಲ ಸೆಲೆ ಹೇರಳವಾಗಿ ಸಿಗುತ್ತದೆ. ಆಯಾ ಪ್ರದೇಶದಲ್ಲಿ ಸುಮಾರು 15-20 ಅಡಿ ಆಳದಲ್ಲಿ ಅನೇಕ ಜಲ ಸೆಲೆಗಳು ತೆರೆದ ಬಾವಿಗಳಲ್ಲಿ ಕಂಡುಬಂದಿದೆ. ತೆರೆದ ಬಾವಿ ಅಂತಿಮ ಹಂತಕ್ಕೆ ಬರಲು ಕನಿಷ್ಠ 18 ರಿಂದ 20 ದಿನ ಬೇಕಾಗುತ್ತದೆ ಎನ್ನುತ್ತಾರೆ ಜಿಪಂ ಅಧಿಕಾರಿಗಳು.

    2003-04ನೇ ಸಾಲಿನ ಅವಧಿ ಯಲ್ಲಿ ಜಲಾಯನ ಅಭಿವೃದ್ಧಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ತೆರೆದ ಬಾವಿ ನಿರ್ವಿುಸಲಾಗಿತ್ತು. ಬಳಿಕ ಯೋಜನೆ ಸ್ಥಗಿತ ಗೊಂಡಿತ್ತು. ಇದೀಗ ಸರ್ಕಾರ ನರೇಗಾ ಯೋಜನೆ ಯಡಿ ತೆರೆದ ಬಾವಿ ನಿರ್ವಿುಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಂಡಿದೆ.

    | ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ

    1.25 ಲಕ್ಷ ರೂ. ನೆರವು: ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂತರ್ಜಲ ವೃದ್ಧಿ ಜತೆಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ತೆರೆದ ಬಾವಿ ನಿರ್ವಣಕ್ಕೆ ಅವಕಾಶ ನೀಡುತ್ತಿವೆ. ಬಾವಿ ತೋಡುವ ಕಾರ್ಯಕ್ಕೆ ನರೇಗಾ ಯೋಜನೆ ಮೂಲಕ ಆದ್ಯತೆ ನೀಡಿದೆ. 9 ಮೀಟರ್​ನಿಂದ 15 ಮೀಟರ್ ಆಳದ ತೆರೆದ ಬಾವಿ ತೆಗೆಯಲು 80 ಸಾವಿರದಿಂದ 1.25 ಲಕ್ಷ ರೂ.ವರೆಗೆ ನೆರವು ನೀಡಲಾಗುತ್ತಿದೆ. ಕೂಲಿ ಕಾರ್ವಿುಕರನ್ನು ಬಳಸಿಕೊಂಡು ತೆರೆದ ಬಾವಿ ನಿರ್ವಿುಸುವುದರಿಂದ ನಿತ್ಯವೂ 30ರಿಂದ 50 ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಂತಾಗಿದೆ.

    ನರೇಗಾ ಯೋಜನೆಯಡಿ ಹಳ್ಳಿಗಳಲ್ಲಿ ತೆರೆದ ಬಾವಿ ನಿರ್ವಣಕ್ಕೆ ಅವಕಾಶ ನೀಡಲಾಗುತ್ತಿದ್ದು, ಹಲವು ರೈತರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ 480 ಗ್ರಾಪಂ ವ್ಯಾಪ್ತಿಯಲ್ಲಿ 2,816 ತೆರೆದ ಬಾವಿ ನಿರ್ವಣಕ್ಕೆ ಗುರಿ ಹಾಕಿಕೊಂಡಿದ್ದು, 1,390 ಬಾವಿಗಳ ಕಾಮಗಾರಿ ಪ್ರಗತಿಯಲ್ಲಿದೆ. 1,426 ಬಾವಿಗಳ ಕಾಮಗಾರಿಗಳು ಆರಂಭದ ಹಂತದಲ್ಲಿವೆ.

    | ಎಚ್.ವಿ. ದರ್ಶನ ಜಿಪಂ ಸಿಇಒ, ಬೆಳಗಾವಿ

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts