ಚುನಾವಣಾ ಆಯೋಗ ನ್ಯಾಯಾಲಯದಂತೆ ವರ್ತಿಸಲು ಸಾಧ್ಯವಿಲ್ಲ |P Chidambaram

Chidambaram
Published on

P Chidambaram: ಭಾರತದ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಆಡಳಿತಾತ್ಮಕ ಸಂಸ್ಥೆಯಾಗಿದ್ದು, ಅರ್ಜಿಗಳು ಅಥವಾ ದೂರುಗಳನ್ನು ಸ್ವೀಕರಿಸುವಾಗ ನ್ಯಾಯಾಲಯದಂತೆ ವರ್ತಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಿಳಿಸಿದ್ದಾರೆ

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಚಿದಂಬರಂ, 1960 ರ ಮತದಾರರ ನೋಂದಣಿ ನಿಯಮಗಳ 20(3)(b) ಪ್ರಕಾರ, ಮತದಾರರನ್ನು ಪಟ್ಟಿಯಲ್ಲಿ ಸೇರಿಸುವ ಮತ್ತು ತಿರಸ್ಕರಿಸುವ ಹಕ್ಕು ERO (electoral registration officer) ತೆಗೆದುಕೊಂಡ ನಿರ್ದಿಷ್ಟ ಪ್ರಕರಣಕ್ಕೆ ಮಾತ್ರ ಇರುತ್ತದೆ ಎಂದರು. ಇಡೀ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಕೈಚಳಕದ ಆರೋಪದ ಸಂದರ್ಭದಲ್ಲಿ ಇದು ಅನ್ವಯವಾಗುವುದಿಲ್ಲ ಎಂದರು.

ಚುನಾವಣಾ ಸಂಸ್ಥೆಯು ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೆ ದೇಶದ ಮತದಾರರಿಗೂ ಕರ್ತವ್ಯ ನಿರ್ವಹಿಸಬೇಕು ಎಂದು ವ್ಯಂಗ್ಯವಾಡಿದ್ದು,

ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮತದಾರನೊಬ್ಬ ಎರಡು ಬಾರಿ ಮತ ಚಲಾಯಿಸಿದ್ದಾನೆ ಎಂಬ ಆರೋಪವನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಳಿದ ನಂತರ ಚಿದಂಬರಂ ಅವರ ಟ್ವೀಟ್ ಬಂದಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net