ನವದೆಹಲಿ: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್, ಜನರ ಮೇಲೆ ವಿಚಿತ್ರ ನಿಯಮಗಳನ್ನು ಹೇರಿ ನಾನಾ ಸಮಸ್ಯೆ ಉಂಟು ಮಾಡುತ್ತಾರೆ. ಸರ್ವಾಧಿಕಾರಿ ಎಂದೇ ಹೆಸರಾದ ಕಿಮ್ ಕಣ್ಣೀರು ಹಾಕಿರುವುದು ಇದೀಗ ಜಗತ್ತಿನ ಅತ್ಯಂತ ಸಂಚಲನದ ಸುದ್ದಿಯಾಗಿದೆ.
ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸುವ ಕಿಮ್ ಪ್ರಥಮ ಬಾರಿಗೆ ಕಣ್ಣೀರು ಹಾಕಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸುವಂತಿದೆ. ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ದೇಶದ ಜನರನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಸರ್ವಾಧಿಕಾರಿ. ಇಂತಹ ವ್ಯಕ್ತಿ ಈಗ ದೇಶದ ಜನತೆಯ ಮುಂದೆ ಕಣ್ಣೀರಿಟ್ಟಿದ್ದಾರೆ. ಇದು ತುಂಬಾ ಆಶ್ಚರ್ಯಕರವಾಗಿದೆ. ಕಿಮ್ ಜಾಂಗ್ ಉನ್ ತನ್ನ ಕಣ್ಣುಗಳನ್ನು ಕರವಸ್ತ್ರದಿಂದ ಒರೆಸುವ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ಯೋಂಗ್ಯಾಂಗ್‌ನಲ್ಲಿ ತಾಯಂದಿರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್, ಮನೆಯನ್ನು ಜವಾಬ್ದಾರಿತಯುತವಾಗಿ ನೋಡಿಕೊಳ್ಳಬೇಕಾದವರು ಮಹಿಳೆಯರಾಗಿದ್ದಾರೆ. ದೇಶದಲ್ಲಿ ಜನನ ಪ್ರಮಾಣ ಕುಸಿಯುತ್ತಿದ್ದು, ಇದನ್ನು ಪರಿಹರಿಸಲು ಮಹಿಳೆಯರು ಹೆಚ್ಚು ಮಕ್ಕಳನ್ನು ಪಡೆಯಲಿ ಎಂದು ಕಣ್ಣೀರು ಹಾಕಿದರು. ಕಣ್ಣೀರು ಸುರಿಸುತ್ತಿರುವ ಕಿಮ್ ತನ್ನ ಕಣ್ಣುಗಳನ್ನು ಒರೆಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಕೊರಿಯಾದ ಜನರು ಹೇಗೆ ಬದುಕಬೇಕು, ಯಾವಾಗ ಅಳಬೇಕು, ಯಾವಾಗ ಅಳಬಾರದು, ಯಾವ ಬಟ್ಟೆ ತೊಡಬೇಕು, ಯಾವ ಹೇರ್ ಸ್ಟೈಲ್ ಧರಿಸಬೇಕು ಎಂದು ಕಿಮ್ ಹೇಳಿರುವುದು ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ.
Kim Jong Un CRIES while telling North Korean women to have more babies.
The dictator shed tears while speaking at the National Mothers Meeting as he urged women to boost the countries birth rate. pic.twitter.com/J354CyVnln
— Oli London (@OliLondonTV) December 5, 2023
ಉತ್ತರ ಕೊರಿಯಾದಲ್ಲಿ ಕೆಲ ದಿನಗಳಿಂದ ಜನನ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಧಾನಿ ಪಯೋಂಗ್‌ಯಾಂಗ್‌ನಲ್ಲಿ ತಾಯಂದಿರಿಗಾಗಿ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿದೆ. ಅಧ್ಯಕ್ಷ ಕಿಮ್ ಈ ಸಭೆಯಲ್ಲಿ ಮಾತನಾಡಿ, ನಮ್ಮ ಸರ್ಕಾರವು ತಾಯಂದಿರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತದೆ. ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ಹೇಳುತ್ತಾ ಅವರು ಭಾಷಣದ ಮಧ್ಯೆ ಕಣ್ಣೀರು ಒರೆಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸರ್ವಾಧಿಕಾರಿಯೂ ಭಾವುಕರಾಗಬಹುದು ಎಂಬುದನ್ನು ಕಿಮ್ ಕಣ್ಣೀರು ತೋರಿಸುತ್ತದೆ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ಉತ್ತರ ಕೊರಿಯಾದ ಫಲವತ್ತತೆಯ ಪ್ರಮಾಣವನ್ನು ದಶಕದಲ್ಲಿ 1.8 ಎಂದು ಅಂದಾಜಿಸಿದೆ. ಇದು ಉತ್ತರ ಕೊರಿಯಾದ ಕೆಲವು ಗಡಿ ದೇಶಗಳಿಗಿಂತ ಹೆಚ್ಚಾಗಿದೆ. ದಕ್ಷಿಣ ಕೊರಿಯಾದ ಫಲವತ್ತತೆ ದರ 1.2ಕ್ಕೆ ಕುಸಿದಿದೆ. ದಕ್ಷಿಣ ಕೊರಿಯಾವು ಮಕ್ಕಳ ವೈದ್ಯರ ಕೊರತೆಯನ್ನು ಎದುರಿಸುತ್ತಿದೆ, ಒಂದು ನಗರವು ದೇಶದ ಜನನ ಪ್ರಮಾಣವನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.