

ನವದೆಹಲಿ: ತೆಲುಗು ಚಿತ್ರರಂಗದಲ್ಲಿ(Tollywood) ಡಾರ್ಲಿಂಗ್ ಎಂದೇ ಕರೆಸಿಕೊಳ್ಳುವ ನಟ ಪ್ರಭಾಸ್(Actor Prabhas) ಇದೀಗ ಭಾರಿ ಟೀಕೆಗೆ ಗುರಿಯಾಗಿದ್ದಾರೆ.
ಕಳೆದ ಶುಕ್ರವಾರ ಬಿಡುಗಡೆಗೊಂಡ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರಕ್ಕೆ ಇದೀಗ ವ್ಯಾಪಕ ಖಂಡನೆ(Oppose) ವ್ಯಕ್ತವಾಗುತ್ತಿದ್ದು, ಚಿತ್ರದ ನಿರ್ದೇಶಕ(Director), ನಿರ್ಮಾಪಕ ಸೇರಿದಂತೆ ಕಲಾವಿದರ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
ಆದಿಪುರುಷ್(Adipurush) ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ರಾಮ, ಸೀತಾ ಮಾತೆ, ಹನುಮಂತ, ರಾಕ್ಷಸ ರಾಜ ರಾವಣ ಮತ್ತು ಮಹಾಕಾವ್ಯ ರಾಮಾಯಣದ ಹಲವಾರು ನಿರ್ಣಾಯಕ ಅಂಶಗಳನ್ನು ಚಿತ್ರಿಸಿರುವ ರೀತಿ ಒಪ್ಪುವಂತದಲ್ಲ! ಇದು ನಮ್ಮ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತಂದಿದೆ ಎಂದು ಉತ್ತರ ಭಾರತದ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಭಾರತದ ವಿವಿಧ ನಗರಗಳಲ್ಲಿ ಆದಿಪುರುಷ್ ಚಿತ್ರದ ವಿರುದ್ಧ ಪ್ರತಿಭಟನೆಗಳು(Protest) ತೀವ್ರಗೊಂಡಿದ್ದು, ಕೂಡಲೇ ಈ ಚಿತ್ರವನ್ನು ರಾಷ್ಟ್ರವ್ಯಾಪಿ ನಿಷೇಧಿಸಬೇಕು ಎಂದು ಚಿತ್ರತಂಡದ ಮೇಲೆ ಒತ್ತಾಯ ಹೇರಿದ್ದಾರೆ. ಈ ಕುರಿತು ಪ್ರತಿಭಟನಾಕಾರರು ಹಲವಾರು ಚಿತ್ರಮಂದಿರಗಳ ಮೇಲೆ ದಾಳಿ ಮಾಡುವ ಮುಖೇನ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದಾರೆ.
ಪವಿತ್ರ ಮಹಾಕಾವ್ಯ ರಾಮಾಯಣವನ್ನು ತಿರುಚಿದ ಮತ್ತು ಅವಹೇಳನ ಮಾಡಿದ್ದಕ್ಕಾಗಿ ಚಿತ್ರ ತಯಾರಕರ ವಿರುದ್ಧ ಕಠಿಣ ಕ್ರಮಕ್ಕೆ ಹಲವರು ಆಗ್ರಹಿಸಿದ್ದಾರೆ. ಸದ್ಯ ಆದಿಪುರುಷ್ ಚಿತ್ರ ದಿನದಿಂದ ದಿನಕ್ಕೆ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದು, ನಟ ಪ್ರಭಾಸ್ ಅವರನ್ನು ಅನಗತ್ಯವಾಗಿ ಟ್ರೋಲ್(Troll) ಮಾಡಲಾಗುತ್ತಿದೆ. ವಿವಾದಗಳತ್ತ ಸುಳಿಯದ ನಟ ಪ್ರಭಾಸ್ ಶೀಘ್ರವೇ ಇದಕ್ಕೆಲ್ಲಾ ಉತ್ತರ ನೀಡಲಿದ್ದಾರೋ ಅಥವಾ ಉತ್ತರಿಸದೆ ಮೌನ ತಾಳಲಿದ್ದಾರೋ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).