ಕನ್ನಡಿಗರ ಮೇಲಿನ‌ ಕೇಂದ್ರ ಬಿಜೆಪಿ ಸರ್ಕಾರದ ದೌರ್ಜನ್ಯ ಖಂಡಿಸೋಣ: ದಿನೇಶ್ ಗುಂಡೂರಾವ್

dinesh gundurao
dinesh gundurao tweet
Published on

ಬೆಂಗಳೂರು: ಕೇಂದ್ರ ಸರ್ಕಾರ(Central Government) ಕ‌ನ್ನಡಿಗರಿಗೆ ಅಕ್ಕಿ ನೀಡದೆ ದ್ವೇಷ ಸಾಧಿಸುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್(Dinesh Gundurao) ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಕ‌ನ್ನಡಿಗರಿಗೆ ಅಕ್ಕಿ ನೀಡದೆ ದ್ವೇಷ ಸಾಧಿಸುತ್ತಿರುವ ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಇಂದು ರಾಜ್ಯ ಕಾಂಗ್ರೆಸ್(State Congress) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಯಲ್ಲಿ ಕನ್ನಡಿಗರೆಲ್ಲರೂ ಪಾಲ್ಗೊಳ್ಳುವ ಮೂಲಕ ನಮ್ಮ ಆಸ್ಮಿತೆ ಮತ್ತು ಸ್ವಾಭಿಮಾನದ ಪ್ರದರ್ಶನ ಮಾಡೋಣ. ಕನ್ನಡಿಗರ ಮೇಲಿನ‌ ಕೇಂದ್ರ ಬಿಜೆಪಿ ಸರ್ಕಾರದ ದೌರ್ಜನ್ಯ ಖಂಡಿಸೋಣ" ಎಂದು ಟ್ವೀಟ್(Tweet) ಮಾಡಿದ್ದಾರೆ.

"ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕನ್ನಡಿಗರನ್ನು ಮಲತಾಯಿ ಮಕ್ಕಳಂತೆ ಉಪಚರಿಸುತ್ತಿದೆ. 2019ರಲ್ಲಿ ರಾಜ್ಯದ ಜನ 25 ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ್ದರು. ಆದರೂ ಉಪಕಾರ ಸ್ಮರಣೆ ಇಲ್ಲದ ಮೋದಿ ಸರ್ಕಾರ ರಾಜ್ಯದ ಕಣ್ಣಿಗೆ ಸುಣ್ಣ ಸವರುತ್ತಲೇ ಇದೆ. ಈಗ ಅಕ್ಕಿ ನೀಡದೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಎಷ್ಟು ದಿನ ಈ ತಾರತಮ್ಯ?" ಎಂದು ಟ್ವೀಟ್ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net