More

    ನಿಮ್ಮ ಉಚಿತ ಖಚಿತ ನಿಶ್ಚಿತ ಬಟಾಬಯಲಾಗಿದೆ: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

    ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಅಕ್ಕಿ ನಿರಾಕರಣೆ ಆರೋಪ ಮಾಡಿದ್ದು, ಈ ಸಂಬಂಧ ಇಂದು ಕಾಂಗ್ರೆಸ್​ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

    ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕೈಗೊಂಬೆಯಾಗಿರುವ ರಾಜ್ಯ ಎಟಿಎಂ ಸರ್ಕಾರ, ಪ್ರತಿಭಟನೆ ಎಂಬ ಬೃಹನ್ನಳೆ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ. ನಿಮ್ಮ ಉಚಿತ ಖಚಿತ ನಿಶ್ಚಿತ ಬಟಾಬಯಲಾಗಿದೆ. ನೀವು ಹೇಳಿದ ಗ್ಯಾರಂಟಿಗಳು ನಿಮ್ಮ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ? ಕಳೆದ ಬಾರಿ ಮೋದಿ ಸರ್ಕಾರದ ಅಕ್ಕಿಯನ್ನೇ ನಿಮ್ಮ ಖಾಲಿ ಚೀಲಕ್ಕೆ ಹಾಕಿ ಹಂಚುವಾಗ ಏಕೆ ಸತ್ಯ ತಿಳಿಸಿರಲಿಲ್ಲ? ವಿದ್ಯುತ್ ದರ ಏರಿಕೆ, ಉಚಿತ ಬಸ್ ಪ್ರಯಾಣದ ವೈಫಲ್ಯವನ್ನು ಬೇರೆಡೆಗೆ ತಳ್ಳಲು ಈ ನಾಟಕವೇ? ಸತ್ಯ ಯಾವಾಗಲು ಕಹಿಯೇ. ಸಬೂಬು ಹೇಳದೆ, ನಾಟಕ ಮಾಡದೆ, ಮೋದಿ ಸರ್ಕಾರ ಈಗಾಗಲೇ ಉಚಿತವಾಗಿ ಕೊಡುತ್ತಿರುವ 5 ಕೆಜಿ ಅಕ್ಕಿ ಬಿಟ್ಟು ತಮ್ಮ ಗ್ಯಾರಂಟಿಯ 10 ಕೆಜಿ ಅಕ್ಕಿಯನ್ನು ರಾಜ್ಯಕ್ಕೆ ಕೊಡಬೇಕಾದ್ದು ಧರ್ಮ ಎಂದು ಬಿಜೆಪಿ ಟ್ವೀಟ್​ ಮಾಡುವ ಮೂಲಕ ಟೀಕಾ ಪ್ರಹಾರ ನಡೆಸಿದೆ.

    ಇದನ್ನೂ ಓದಿ: ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 8 ದಿನದಲ್ಲಿ 3.63 ಕೋಟಿಗೂ ಅಧಿಕ ಮಹಿಳೆಯರ ಪ್ರಯಾಣ, ಖರ್ಚಾಗಿದ್ದೆಷ್ಟು?

    ಜನರ ಅಭಿಪ್ರಾಯ ಬದಲಾಯಿಸಲು ಹೊರಟ ಕಾಂಗ್ರೆಸ್

    ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಜುಲೈ 1 ರಿಂದ ಅಕ್ಕಿ ನೀಡಬೇಕು. ಆದರೆ, ಭಾರತೀಯ ಆಹಾರ ನಿಗಮ ಅಕ್ಕಿ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟವಾಗಿದೆ. ಒಂದು ವೇಳೆ ಅಕ್ಕಿ ಕೊಡಲು ಸಾಧ್ಯವಾಗದೇ ಇದ್ದರೆ, ಕೊಟ್ಟ ಮಾತು ತಪ್ಪಿದ ಸರ್ಕಾರ ಎಂಬ ಕೆಟ್ಟ ಹೆಸರು ಸರ್ಕಾರಕ್ಕೆ ಬರಲಿದೆ. ವಿಪಕ್ಷಗಳು ಕೂಡ ಇದೆ ಅವಕಾಶಕ್ಕೆ ಕಾಯುತ್ತಿವೆ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ ಪಕ್ಷ, ಪ್ರತಿಭಟನೆಗೆ ಮುಂದಾಗಿದೆ. ಈ ಮೂಲಕ ಜನರ ಅಭಿಪ್ರಾಯ ಬದಲಾವಣೆ ಮಾಡಲು ಕಾಂಗ್ರೆಸ್ ಹೊರಟಿದೆ.

    ಯೋಜನೆ ವಿಳಂಭಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಜನರ ಮುಂದೆ ಬಿಂಬಿಸಲು ಕಾಂಗ್ರೆಸ್​ ಮುಂದಾಗಿದೆ. ಇದೇ ವಿಚಾರವನ್ನು ಲೋಕಸಭೆ ಚುನಾವಣೆವರೆಗೂ ಕೊಂಡೊಯ್ಯಲು ಕಾಂಗ್ರೆಸ್​ ನಿರ್ಧಾರ ಮಾಡಿದೆ. ಮೊದಲು ಅಕ್ಕಿ ಕೊಡುತ್ತೇವೆ ಎಂದು ನಂತರ ಕೇಂದ್ರ ಸರ್ಕಾರ ಮಾತು ಬದಲಿಸಿದೆ. ಇದು ರಾಜ್ಯದ ಜನತೆಗೆ ಮಾಡಿದ ಅನ್ಯಾಯ ಎಂದು ಹೇಳಿ, ಇದೇ ವಿಚಾರ ಇಟ್ಟುಕೊಂಡು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಪ್ರತಿಭಟನಾ ಅಖಾಡಕ್ಕೆ ಸಿಎಂ ಆದಿಯಾಗಿ ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಗಾಸಿಪ್​ಗೊಂದು ಫುಲ್​ಸ್ಟಾಪ್!; ಗಾಸಿಪ್ ಮಾಡಲು ಕಾರಣ?

    ಸುಕ್ಕು ಕೂದಲಿಗೆ ಶಾಶ್ವತ ಪರಿಹಾರ ಹೇರ್ ಸ್ಟ್ರೈಟ್​ನಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts