ಸುಕ್ಕು ಕೂದಲಿಗೆ ಶಾಶ್ವತ ಪರಿಹಾರ ಹೇರ್ ಸ್ಟ್ರೈಟ್​ನಿಂಗ್

Hair
Published on

| ಎಚ್.ಆರ್.ಎ

ಹೇರ್ ಸ್ಟ್ರೈಟ್​ನಿಂಗ್ ಹೆಸರೇ ಹೇಳುವಂತೆ ಕೂದಲನ್ನು ಸರಳ ರೇಖೆಯ ತರಹ ನೇರಗೊಳಿಸುವುದು. ಇದು ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಈಗಲೂ ಟ್ರೆಂಡಿಯಲ್ಲಿದೆ. ಕೂದಲು ಒರಟಾಗಿ ಹುಲ್ಲಿನ ಹಾಗೆ ಬೆಳೆದುಕೊಂಡಿದ್ದರೆ, ಗುಂಗುರಿದ್ದರೆ ಮಷಿನ್ ಮೂಲಕ ಐರನ್ ಮಾಡಲಾಗುವುದು. ಆಗ ಕೂದಲು ನೀಟಾಗಿ ಕೂರುವುದಲ್ಲದೆ, ಸಿಲ್ಕಿಯಾಗಿ ಕಾಣುವುದು. ಫ್ರೀ ಹೇರ್ ಬಿಡಲು ಅನುಕೂಲವಾಗುವುದು. ಅನೇಕರಿಗೆ ಸ್ಟ್ರೈಟ್​ನಿಂಗ್ ಮಾಡಿಸಿದರೆ ಇರುವ ಕೂದಲನ್ನು ಕಳೆದುಕೊಂಡು ಬೊಕ್ಕ ತಲೆಯಾದ ಎಂಬ ಚಿಂತೆ. ಆದ್ದರಿಂದ ಅದರ ಗೊಡವೆಯೇ ಬೇಡವೆಂದು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಆದರೆ ಸರಿಯಾಗಿ ಮಾರ್ಗದರ್ಶನ ಪಡೆದು ಮಾಡಿಸಿದರೆ ಯಾರ ಕೂದಲೂ ಹಾಳಾಗುವ ಸಾಧ್ಯತೆಗಳಿರುವುದಿಲ್ಲ.

ಸ್ಟ್ರೈಟ್​ನಿಂಗ್​ನಲ್ಲಿ ಎರಡು ವಿಧಾನಗಳನ್ನು ಅನುಸರಿಸಲಾಗುವುದು. ಒಂದು ಟೆಂಪರರಿ, ಇನ್ನೊಂದು ಪರ್ಮನೆಂಟ್. ಟೆಂಪರರಿ ಮಾಡಿಸಿದರೆ ಕೆಲವು ದಿನಗಳ ನಂತರ ಹೋಗಿಬಿಡುತ್ತದೆ. ಗಟ್ಟಿಯಾಗಿ ನಿಲ್ಲುವುದಿಲ್ಲ. ಪರ್ಮನೆಂಟ್ ಆದರೆ 6 ವರ್ಷಗಳ ಗ್ಯಾರಂಟಿ ಕೊಡಬಹುದು. ಕೆಲವರು ಇದನ್ನು ಮನೆಯಲ್ಲೇ ಮಾಡಿಕೊಳ್ಳಬಹುದು ಎಂದು ಸೂಚಿಸುತ್ತಾರೆ. ಅದು ಸರಿಯಾದ ಕ್ರಮವಲ್ಲ. ತಜ್ಞರ ಬಳಿಯಾದರೆ ನಿಮ್ಮ ಕೂದಲಿನ ಸ್ಥಿತಿಗತಿಗಳನ್ನು ನೋಡಿಕೊಂಡು ಮುಂದುವರಿಯುತ್ತಾರೆ. ಆದ್ದರಿಂದ ಸಲೂನ್​ಗಳಲ್ಲಿ ಮಾಡಿಸಿಕೊಳ್ಳುವುದು ಬೆಸ್ಟ್.

ನೆನಪಿಡಿ

ಕೆಮಿಕಲ್ ಇಲ್ಲದೆಯೇ ಹೇರ್ ಸ್ಟ್ರೈಟ್​ನಿಂಗ್ ಮಾಡುವ ವಿಧಾನವನ್ನು ಇದುವರೆಗೂ ಕಂಡುಹಿಡಿದಿಲ್ಲ. ಆದ್ದರಿಂದ ಇಲ್ಲಿ ಕೆಮಿಕಲ್ ಬಳಕೆ ಅಗತ್ಯವಾಗಿದೆ. ಹೇರ್ ಸ್ಪೆಷಲಿಸ್ಟ್​ಗಳನ್ನು ಕೇಳಿ ಪರ್ಮನೆಂಟ್ ಸ್ಟ್ರೈಟ್​ನಿಂಗ್ ಮಾಡಿಸಿದರೆ ಯಾವುದೇ ರೀತಿಯ ಹಾನಿ ಸಂಭವಿಸುವುದಿಲ್ಲ.

ಕೂದಲಿನ ಆರೈಕೆ ಹೇಗಿರಬೇಕು?

  • ಸ್ಟ್ರೈಟ್​ನಿಂಗ್ ಮಾಡಿಸುವವರು ಕಡ್ಡಾಯವಾಗಿ ಹೇರ್ ಸ್ಪಾ ಮಾಡಿಸಬೇಕು.
  • ಹೇರ್ ಸ್ಪಾ-ಕೂದಲಿನ ಕಂಡೀಶನ್ ನೋಡಿಕೊಂಡು ಎಷ್ಟು ಸ್ಪಾ ಬೇಕೆಂಬುದನ್ನು ಬ್ಯೂಟಿಷಿಯನ್​ಗಳು ಅಥವಾ ಹೇರ್ ಸ್ಟೈಲಿಸ್ಟ್​ಗಳು ಹೇಳುತ್ತಾರೆ.
  • ಕೆಲವು ಸಾರಿ 100ಕ್ಕೆ 100 ರಷ್ಟು ಫಲಿತಾಂಶ ಸಿಗದಿದ್ದರೂ, ಮೊದಲಿಗಿಂತ ಕೂದಲಿನ ಸ್ಥಿತಿ ಉತ್ತಮವಾಗಿಯಂತೂ ಇರುತ್ತದೆ.
  • ಸ್ಟ್ರೈಟ್​ನಿಂಗ್ ಆದ ನಂತರ ಕೂದಲನ್ನು 2 ದಿನ ಬಿಗಿಯಾಗಿ ಕಟ್ಟುವುದಾಗಲೀ, ಟೈಟ್ ಹೇರ್ ಬ್ಯಾಂಡ್, ಕ್ಲಿಪ್ ಹಾಕುವುದಾಗಲೀ ಮಾಡಬಾರದು. ಬಹಳ ಹುಷಾರಾಗಿ ನೋಡಿಕೊಳ್ಳಬೇಕು.
  • ಸ್ಟ್ರೈಟ್​ನಿಂಗ್ ನಂತರದ ಫಸ್ಟ್ ವಾಶ್​ಗೆ ಸಲೂನ್​ಗೆ ಹೋಗಬೇಕು. ಅಲ್ಲಿ ಅದನ್ನು ನೀಟಾಗಿ ಸೆಟ್ ಮಾಡ್ತಾರೆ.
  • ಕೂದಲನ್ನು ಒರಟಾಗಿ ಬಾಚಬಾರದು. ಹೇರ್ ಬ್ರಾಡ್ ಬ್ರಷ್ ಉಪಯೋಗಿಸಬೇಕು. ಮನೆಯಲ್ಲಿ ಆಗಾಗ ನಿಮಗೆ ಗೊತ್ತಿರುವ ಹೋಮ್ ಹೇರ್ ಕೇರ್ ಮಾಡಿ.
  • ಕೂದಲಿಗೆ ಆಯಿಲ್ ಮಸಾಜ್​ಗಿಂತ ಹೇರ್ ಸ್ಪಾ ಬೆಸ್ಟ್.
  • ಕೂದಲು ಕೆಂಚ, ಕೆಂಪು ಯಾವುದಿದ್ದರೂ ಸ್ಟ್ರೈಟ್​ನಿಂಗ್ ಮಾಡಿಸುವುದರಲ್ಲಿ ತಪ್ಪೇನಿಲ್ಲ. ಸ್ಟ್ರೈಟ್​ನಿಂಗ್ ಮುನ್ನ ಹೇರ್ ಸ್ಟೈಲಿಸ್ಟ್ ಭೇಟಿ ಮಾಡಿದರೆ, ಅವರು ನಿಮ್ಮ ಕೂದಲಿಗೆ ಅನುಗುಣವಾಗಿ ಸಲಹೆಗಳನ್ನು ಕೊಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net