More

    ‘ಕೆಡಿ’ ಲೋಕಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಬೆಡಗಿ

    ಬೆಂಗಳೂರು: ಧ್ರುವ ಸರ್ಜಾ ನಟನೆಯ, ಪ್ರೇಮ್​ ನಿರ್ದೇಶನದ ಬಹುನಿರೀಕ್ಷಿತ ಕೆಡಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಸಿನಿಮಾದಲ್ಲಿ ಬಹುತಾರಾಗಣವಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಕೆಡಿ ಚಿತ್ರವು ಸಿನಿರಸಿಕರ ಗಮನ ಸೆಳೆಯುತ್ತಿದ್ದು, ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ.

    ಪ್ರೇಮ ಅವರ ನಿರ್ದೇಶನದ ಚಿತ್ರಗಳಲ್ಲಿ ಸಾಮಾನ್ಯವಾಗಿ ಐಟಂ ಹಾಡುಗಳಿರುತ್ತವೆ. ಅದರಲ್ಲಿ ಬಾಲಿವುಡ್​​ ನಟಿಮಣಿಯರೆ ಹೆಚ್ಚು ಸ್ಟೆಪ್ಸ್​ ಹಾಕಿರುವುದನ್ನು ನೋಡಬಹುದಾಗಿದೆ. ಯಾನಾ ಗುಪ್ತಾ, ಮಲೈಕಾ ಶೆರಾವತ್, ಸನ್ನಿ ಲಿಯೋನಿ, ಆ್ಯಮಿ ಜಾಕ್ಸನ್​ರನ್ನು ಕರೆಸಿ ಐಟಂ ಹಾಡು ಚಿತ್ರೀಕರಿಸಿದ್ದಾರೆ. ಇದೀಗ ಕೆಡಿ ಅಡ್ಡಕ್ಕೆ ಬಾಲಿವುಡ್​​ ಬೆಡಗಿ ನೋರಾ ಫತೇಹಿ ಎಂಟ್ರಿ ಕೊಟ್ಟಿದ್ದು, ಈ ಕುರಿತು ನಟ ಪ್ರೇಮ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಮಾಜಿ ಪ್ರಿಯಕರನನ್ನು ಮತ್ತೆ ತನ್ನ ಬಲೆಗೆ ಬೀಳಿಸಿಕೊಳ್ಳಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ

    ನಿರ್ದೇಶದಕ ಪ್ರೇಮ್​ ಹಂಚಿಕೊಂಡಿರುವ ವಿಡಿಯೋದಲ್ಲಿ ಕೆಡಿ ಸೆಟ್​ಗೆಭೇಟಿ ನೀಡಿದ ನೋರಾ ಫತೇಹಿ ಚಿತ್ರತಂಡದ ಸದಸ್ಯರ ಹೊತೆ ಮಾತುಕತೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ನಟ ಸಂಜಯ್​ ದತ್​, ನೃತ್ಯ ನಿರ್ದೇಶಕ ರಾಜು ಸುಂದರಂ ಅವರ ಜೊತೆ ಮಾತನಾಡುತ್ತಿರುವುದನ್ನು ಹಂಚಿಕೊಳ್ಳಲಾದ ವಿಡಿಯೋದಲ್ಲಿ ನೋಡಬಹುದಾಗಿದೆ. ನೋರಾ ಫತೇಹಿ ಕೆಂಪು ಬಣ್ಣದ ಉಡುಗೆ ತೊಟ್ಟು ಗ್ಲಾಮರಸ್ ಆಗಿ ಪೋಸ್ ನೀಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪ್ರೇಮ್​ ನಿರ್ದೇಶಿಸುತ್ತಿರುವ ಕೆಡಿ ಸಿನಿಮಾವು ರೆಟ್ರೋ ಹಿನ್ನಲೆಯ ಕಥೆ ಹೊಂದಿದ್ದು, ಚಿತ್ರದಲ್ಲಿ ಬಾಲಿವುಡ್​ ನಟರಾದ ಸಂಜಯ್​ ದತ್​, ಶಿಲ್ಪ ಶೆಟ್ಟಿ, ಜಿಶು ಸೇನ್​ಗುಪ್ತಾ, ರವಿಚಂದ್ರನ್, ರೀಷ್ಮಾ ನಾಣಯ್ಯ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗಿದ್ದು ಶೀಘ್ರದಲ್ಲೇ ಚಿತ್ರತಂಡ ಸಿನಿಮಾದ ಕುರಿತು ಮತ್ತಷ್ಟು ಮಾಹಿತಿ ನೀಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts