

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಮಕ್ಕೆ ಈ ಬಾರಿ 80 ಲಕ್ಷ ರೂ. ಅನುದಾನ ನೀಡಲಾಗಿದ್ದು, ಶಿಲಾನ್ಯಾಸ ಮಾಡಲಾದ ಎಲ್ಲ ಕಾಮಗಾರಿ ಪೂರ್ಣಗೊಂಡಿವೆ. ಎರಡನೇ ಹಂತದ ಅನುದಾನವನ್ನು ಹಂಚುವ ಕಾರ್ಯ ಶೀಘ್ರದಲ್ಲೇ ನಡೆಯಲಿದೆ. ಸರ್ಕಾರದಿಂದ ಸಿಗುವ ಅನುದಾನವನ್ನು ಯಾವುದೇ ರಾಜಕೀಯ ಮಾಡದೆ ಸಮಾನ ರೀತಿಯಲ್ಲಿ ಹಂಚಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಶ್ರೀಕೃಷ್ಣ ಭಜನಾಮಂದಿರ ಸಂಪರ್ಕ ರಸ್ತೆ ಉದ್ಘಾಟಿಸಿ ಮಾತನಾಡಿದರು. ತಲಾ 5 ಲಕ್ಷ ರೂ.ನ ಕೌಡಿಚ್ಚಾರ್ ಶ್ರೀಕೃಷ್ಣ ಭಜನಾಮಂದಿರ ರಸ್ತೆ, ಪಟ್ಲಕಾನ ರಸ್ತೆ, ಜಾರತ್ತಾರು ಪನೆಕ್ಕಲ ರಸ್ತೆ, ತಲಾ 10 ಲಕ್ಷ ರೂ. ಅನುದಾನದ ಕೌಡಿಚ್ಚಾರ್ ಸಿಆರ್‌ಸಿ ಕಾಲೋನಿ ರಸ್ತೆ, ಪಾಪೆಜಾಲು ಪಯಂದೂರು ರಸ್ತೆ, ತಲಾ 15 ಲಕ್ಷ ರೂ. ಅನುದಾನದ ಪಾಪೆಮಜಲು ಪಾದಲಾಡಿ ರಸ್ತೆ, ಕೌಡಿಚ್ಚಾರ್ ಕುತ್ಯಾಡಿ ಮಾಯಿಲಕೊಚ್ಚಿ ರಸ್ತೆ ಮತ್ತು ಶೇಖಮಲೆ ಪಯಂದೂರು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಅರಿಯಡ್ಕ ಗ್ರಾ.ಪಂ. ಸದಸ್ಯರಾದ ವಿನೀತಾ, ಹರೀಶ್ ರೈ ಜಾರತ್ತಾರು, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಅಧ್ಯಕ್ಷ ರಾಮದಾಸ್ ರೈ ಮದ್ಲ, ಪುತ್ತೂರು ಪುಡಾ ಸದಸ್ಯ ನಿಹಾಲ್ ಪಿ.ಶೆಟ್ಟಿ, ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ, ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್, ಕುಶಾಲಪ್ಪ ಗೌಡ ಮಡ್ಯಂಗಳ, ವಿಠಲ್ ನಾಯ್ಕ, ಬಶೀರ್ ಕೌಡಿಚ್ಚಾರ್, ರಾಜೇಶ್ ಆರ್‌ಪಿ, ಜನಾರ್ದನ ಬಲ್ಲಿಕಾನ, ಪ್ರವೀಣ್ ಕರ್ಕೆರಾ ಮಡ್ಯಂಗಳ, ಚಂದ್ರ ಕುತ್ಯಾಡಿ, ಪದ್ಮನಾಭ ಆಚಾರ್ಯ, ಗಣೇಶ್ ಕೌಡಿಚ್ಚಾರ್, ಅಶೋಕ್ ರೈ ದೇರ್ಲ, ಶಿವಪ್ಪ ಕುಲಾಲ್ ಪಾದೆಲಡಿ, ಸತ್ಯಂದ್ರನ್ ಕೌಡಿಚ್ಚಾರ್, ಗೋಪಾಲ ಕೃಷ್ಣ ಮಣಿಯಾಣಿ ಮತ್ತಿತರರು ಉಪಸ್ಥಿತರಿದ್ದರು.