ಪೈವಳಿಕೆಯಲ್ಲಿ ಸಿಪಿಎಂ ವಿಚಾರ ಸಂಕಿರಣ

New Project (14)
Published on

ಉಪ್ಪಳ: ಸಿಪಿಐಎಂ ಕಾಸರಗೋಡು ಜಿಲ್ಲಾ ಸಮ್ಮೇಳನ ಫೆ.5, 6 ಮತ್ತು 7ರಂದು ಕಾಂಞಂಗಾಡ್‌ನಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ಸಿಪಿಎಂ ವತಿಯಿಂದ ಕನ್ನಡದ ಪ್ರಮುಖ ಸಾಹಿತಿ ನಿರಂಜನರ ಶತಾಬ್ದಿ ಸಂಭ್ರಮದ ಅಂಗವಾಗಿ ತುಳುನಾಡಿನ ರೈತ ಹೋರಾಟ ಹಾಗೂ ಕಯ್ಯೂರು ಚಿರಸ್ಮರಣೆಯ ನೆನಪುಗಳ ಕುರಿತಾಗಿ ವಿಚಾರಗೋಷ್ಠಿ ಪೈವಳಿಕೆ ನಗರದಲ್ಲಿ ಇತ್ತೀಚೆಗೆ ನಡೆಯಿತು. ಕನ್ನಡ ಸಾಹಿತಿ, ಹಂಪಿ ವಿವಿ ಮಾಜಿ ಉಪಕುಲಪತಿ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಸಿಪಿಎಂ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಯಮುನಾ ಗಾಂವ್ಕರ್, ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ.ರಮೇಶನ್ ಮಾತನಾಡಿದರು. ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net