

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯ ಶೌರ್ಯ ಘಟಕದ ಸ್ವಯಂಸೇವಕರು ಕೌಕ್ರಾಡಿ ಕಟ್ಟೆಮಜಲು ಧೂಮಾವತಿ ದೈವಸ್ಥಾನ ಆವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಿದರು.
ಶ್ರಮದಾನದ ನಂತರ ಮಾಸಿಕ ಸಭೆಯನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ನೆಲ್ಯಾಡಿ ವಲಯದ ಪ್ರತಿನಿಧಿ ರಮೇಶ್ ಬಾಣಜಾಲು ಅಧ್ಯಕ್ಷತೆಯಲ್ಲಿ ಯೋಜನಾಧಿಕಾರಿ ಮೇದಪ್ಪ ಗೌಡ ಎನ್. ಉಪಸ್ಥಿತಿಯಲ್ಲಿ ನಡೆಸಲಾಯಿತು. ಯೋಜನಾಧಿಕಾರಿಯವರು ಶೌರ್ಯ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು.
ಕಟ್ಟೆಮಜಲು ಧೂಮಾವತಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸದಾನಂದ ಗೌಡ ಕುಂಡಡ್ಕ, ಹಿರಿಯರಾದ ದಿನಕರ ರಾವ್, ಸಮಿತಿ ಪದಾಧಿಕಾರಿ ಶಶಿಧರ್ ಶೆಟ್ಟಿ ಪರಂತಮೂಲೆ, ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ.ಬಿ., ಕೌಕ್ರಾಡಿ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು. ಶೌರ್ಯ ಘಟಕದ ಎಲ್ಲ ಸ್ವಯಂಸೇವಕರು ಸಭೆಯಲ್ಲಿ ಭಾಗವಹಿಸಿದ್ದರು. ಶೌರ್ಯ ಘಟಕ ಸಂಯೋಜಕಿ ನಮಿತಾ ಎಸ್.ಶೆಟ್ಟಿ ನಿರೂಪಿಸಿ ಸ್ವಾಗತಿಸಿದರು. ಕಟ್ಟೆಮಜಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಮನಾ ವಂದಿಸಿದರು.
\https://www.vijayavani.net/cleanliness-work-by-ayyappa-maladharis