15 ತಿಂಗಳ ಪುಟ್ಟ ಕಂದಮ್ಮನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಡೇ ಕೇರ್​ ಸಿಬ್ಬಂದಿ! ವಿಡಿಯೋ ವೈರಲ್​..Day Care

untitled-design-71-68998043d9392 (1)
Published on

Day Care: ಡೇ ಕೇರ್​ ಸೆಂಟರ್​ವೊಂದರಲ್ಲಿ 15 ತಿಂಗಳ ಮಗುವನ್ನು ಕೆಲಸದಾಕೆ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ನೋಯ್ಡಾದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇನ್ನು ಘಟನಾವಳಿಗಳಿಗೆ ಸಂಬಂಧ ಪಟ್ಟ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಗುವಿನ ತಾಯಿ ಡೇ ಕೇರ್​ನಿಂದ ಮಗುವನ್ನು ಮನೆಗೆ ಕರೆದುಕೊಂಡು ಬಂದಾಗ ಮಗು ಜೋರಾಗಿ ಅಳುವುದನ್ನು ಗಮನಿಸಿದ್ದಾಳೆ. ನಂತರ ಬಟ್ಟೆ ಬದಲಾಯಿಸುವಾಗ ತೊಡೆಯ ಮೇಲೆ ವೃತ್ತಾಕಾರವಾದ ಗಾಯಗಳಾಗಿದ್ದನ್ನು ಗಮನಿಸಿ ಆತಂಕ ಗೊಂಡು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಮಾನವರು ಹೊಡೆದಿರುವ ಗುರುತುಗಳು ಎಂದು ವೈದ್ಯರು ಧೃಢಪಡಿಸಿದ್ದಾರೆ.

ಸಿಸಿಟಿವಿ ದೃಶ್ಯದಲ್ಲೇನಿದೆ?

ಇಲ್ಲಿ ಕೆಲಸದಾಕೆ ಮೊದಲು ಅಳುತ್ತಿರುವ ಮಗುವನ್ನು ಎತ್ತುಕೊಂಡು ಸಮಾಧಾನ ಪಡಿಸುತ್ತಿರುವುದನ್ನು ಗಮನಿಸಬಹುದು. ಆದರೆ, ಮಗು ಅಳು ನಿಲ್ಲಿಸದೇ ಇರುವುದರಿಂದ ಕೋಪಗೊಂಡು ಕೋಣೆಯ ಬಾಗಿಲನ್ನು ಮುಚ್ಚಿ, ಕಪಾಳಕ್ಕೆ ಹೊಡೆದು, ಕಚ್ಚಿ, ಪ್ಲಾಸ್ಟಿಕ್​ ಬ್ಯಾಟ್​ನಿಂದ ಮನಬಂದಂತೆ ಹೊಡೆದಿರುವುದನ್ನುಈ ದೃಶ್ಯ ತೋರಿಸುತ್ತದೆ.

ಆರೋಪಿ ಸೇವಕಿ ಬಂಧನ, ಪ್ರಕರಣ ದಾಖಲು

ಆರೋಪಿ ಆರೋಪಿ ವಿರುದ್ಧ ಮಗುವಿನ ತಾಯಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಯನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net