ನ್ಯೂಯಾರ್ಕ್​ನಲ್ಲಿ ಕನ್ನಡ ಸಿನಿಮಾ ಹೌಸ್​ ಫುಲ್​: 'ಸು ಫ್ರಮ್​ ಸೋ' ಸೂಪರ್​ ಎಂದ ಅಮೆರಿಕ ಕನ್ನಡಿಗರು | Su from So

Untitled design - 2025-08-11T103937.048
Published on

Su from So: ಕನ್ನಡದ 'ಸು ಫ್ರಮ್​ ಸೋ' ಇದೇ ಜು.25ರಂದು ವಿಶ್ವದಾಂತ್ಯ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಪಾಸಿಟಿವ್ ರೆಸ್ಪಾನ್ಸ್​ ಪಡೆದುಕೊಳ್ಳುತ್ತಿದೆ. ಇದೀಗ​ ಆ.10ರಂದು(ಶನಿವಾರ) ಅಮೆರಿಕದಲ್ಲಿರುವ ನ್ಯೂಯಾರ್ಕ್ ರಾಜ್ಯದ ಆಲ್ಬನಿ ಕನ್ನಡ ಸಂಘದ 50ಕ್ಕೂ ಅಧಿಕ ಕನ್ನಡಿಗರು 'ಸು ಫ್ರಮ್​ ಸೋ' ಸಿನಿಮಾ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕಿರಿಯರಿಂದ-ಹಿರಿಯರವರೆಗೆ 'ಸು ಫ್ರಮ್​ ಸೋ'ಗೆ ಜೈ

''ಚಿಕ್ಕ ಪಟ್ಟಣವಾದ ನಮ್ಮ ಅಲ್ಬನಿ ಇತಿಹಾಸದಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಒಟ್ಟಾಗಿ ಸಿನಿಮಾವೊಂದನ್ನು ನೋಡಲು ಹೋಗಿದ್ದು ಇದೆ ಮೊದಲು. ಈ ಹಿಂದೆ ಕಾಂತಾರ ಸಿನಿಮಾ ನೋಡಲು ಆಲ್ಬನ್ನಿಯಿಂದ ಸುಮಾರು 30 ಜನರು 200ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಇರುವ ನ್ಯೂಜರ್ಸಿಗೆ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದೆವು" ಎಂದು ಅಪ್ಪಟ ಕನ್ನಡಾಭಿಮಾನಿ, ಕನ್ನಡಿಗರ ನಾಯಕರಾದ ಬೆಂಕಿ ಬಸಣ್ಣ ಹೇಳಿದರು.

ಐದು ವರ್ಷದ ಮಗುವಿನಿಂದ ಹಿಡಿದು 75 ವರ್ಷದ ಹಿರಿಯರವರೆಗೂ ಈ ಸಿನಿಮಾ ನೋಡಲು ಬಂದಿದ್ದರು. ನಮ್ಮೊಡನೆ ಸಿನಿಮಾ ನೋಡಲು ಬಂದಿದ್ದ ನಮ್ಮ ಗೆಳೆಯ ಬಿಹಾರ್ ಮೂಲದ ಮಿತಿಲೇಶ್, ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಭಾರತೀಯ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಸಿನಿಮಾ ಎಂದು ಹಾಡಿ ಹೊಗಳಿದರು.

"ವರಲಕ್ಷ್ಮಿ ಪೂಜೆ, ನಿನ್ನೆ ಕನ್ನಡ ಸಂಘದ ಬಸ್ ಟ್ರಿಪ್ ಇದ್ದರೂ ಸಹಿತ ಇವತ್ತು ಇಷ್ಟೊಂದು ಜನರು ನಮ್ಮ ಕನ್ನಡ ಸಿನಿಮಾವನ್ನು ನೋಡಲಿಕ್ಕೆ ಬಂದು ಪ್ರೋತ್ಸಾಹಿಸಿದ್ದು ತುಂಬಾ ಅಭಿಮಾನದ ಸಂಗತಿ" ಎಂದು ಆಲ್ಬನಿ ಕನ್ನಡ ಸಂಘದ ಅಧ್ಯಕ್ಷೆ ಜ್ಯೋತಿ ಮುರುಂಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net