ನೋಡು ಶಿವ ಎಂದ ಮೇಘಾ

megha
Published on

ಬೆಂಗಳೂರು: ಕೆಲವು ತಿಂಗಳುಗಳ ಹಿಂದಷ್ಟೇ, ಗಣೇಶ್ ಅಭಿನಯದ ‘ತ್ರಿಬ್ಬಲ್ ರೈಡಿಂಗ್’ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದ ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ, ಈಗ ವಿಡಿಯೋ ಸಿಂಗಲ್​ಗಳ ಪ್ರಪಂಚಕ್ಕೂ ಕಾಲಿಟ್ಟಿದ್ದಾರೆ.

ನೋಡು ಶಿವ’ ಎಂಬ ಹಾಡಿಗೆ ಮೇಘಾ ಹೆಜ್ಜೆ ಹಾಕಿದ್ದು, ಅವರ ಜತೆಗೆ ಸುಮಿತ್ ಸಹ ಕಾಣಿಸಿಕೊಂಡಿದ್ದಾರೆ. ಇನ್ನು, ಅತಿಥಿಯಾಗಿ ಚಂದನ್ ಶೆಟ್ಟಿ ಅವರಿಬ್ಬರ ಜತೆಯಾಗಿದ್ದಾರೆ.

ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಎ.ಎಂ.ಸಿ ಇಂಜನಿಯ ರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಹಾಡಿನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜತಗೆ, ಗೀತರಚನೆಯನ್ನೂ ಮಾಡಿದ್ದಾರೆ ಸುಮಿತ್. ಇನ್ನು, ಈ ಹಾಡಿಗೆ ಸಂಗೀತ ಸಂಯೋಜಿಸುವುದರ ಜತೆಗೆ ಧ್ವನಿಯಾಗಿರುವುದು ಚಂದನ್ ಶೆಟ್ಟಿ. 60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೋನಿಕಾ ಕಲ್ಲುರಿ ನಿರ್ವಿುಸಿರುವ ಈ ಹಾಡಿಗೆ ‘ಭಜರಂಗಿ’ ಮೋಹನ್ ನೃತ್ಯ ಸಂಯೋಜಿಸಿದ್ದು, ‘ಹೆಬ್ಬುಲಿ’ ಖ್ಯಾತಿಯ ಕರುಣಾಕರ್ ಛಾಯಾಗ್ರಹಣ ಮಾಡಿದ್ದಾರೆ. ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net