More

    ಸುದೀಪ್​ ಹುಟ್ಟುಹಬ್ಬಕ್ಕೆ ‘ಫ್ಯಾಂಟಮ್​’ ಟೀಸರ್​ ಇಲ್ಲ … ಯಾಕೆ?

    ಕಳೆದ ಒಂದೂವರೆ ತಿಂಗಳುಗಳಿಂದ ‘ಫ್ಯಾಂಟಮ್​’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ ಎರಡು ಸ್ನೀಕ್​ಪೀಕ್​ಗಳು ಮತ್ತು ಮೂರು ಫಸ್ಟ್​ ಲುಕ್​ ಪೋಸ್ಟರ್​ಗಳು ಬಿಡುಗಡೆಯಾಗಿವೆ.

    ಇದನ್ನೂ ಓದಿ: ನಟನಿಗೆ ಹುಟ್ಟುಹಬ್ಬದ ವಿಷ್‌ ಮಾಡಹೋಗಿ ಜೀವ ಕಳೆದುಕೊಂಡ ಅಭಿಮಾನಿಗಳು!

    ಈ ಪೈಕಿ ಸುದೀಪ್​ ಅವರ ಫಸ್ಟ್​ ಲುಕ್​ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಈ ಮಧ್ಯೆ, ಸುದೀಪ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್​ ಬಿಡುಗಡೆ ಆಗಬಹುದು ಎಂಬ ಆಸೆ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಇದೀಗ ನಿರ್ದೇಶಕ ಅನೂಪ್​ ಭಂಡಾರಿ ಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸುದೀಪ್​ ಹುಟ್ಟುಹಬ್ಬಕ್ಕೆ ಟೀಸರ್​ ಬಿಡುಗಡೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸುವುದರ ಜತೆಗೆ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಸುದೀಪ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ‘ಕೋಟಿಗೊಬ್ಬ 3” ಚಿತ್ರದ ಟೀಸರ್​ ಬಿಡುಗಡೆ ಆಗುತ್ತಿದೆ. ಎರಡೂ ಚಿತ್ರಗಳ ಟೀಸರ್​ ಕ್ಲಾಶ್​ ಆಗಬಾರದೆಂಬ ದೃಷ್ಟಿಯಿಂದ ಸುದೀಪ್​ ಹುಟ್ಟುಹಬ್ಬಕ್ಕೆ ‘ಫ್ಯಾಂಟಮ್​’ ಟೀಸರ್​ ಬಿಡುಗಡೆ ಮಾಡುತ್ತಿಲ್ಲ. ಯಾವಾಗ ಮಾಡುತ್ತೀವಿ ಎಂದು ಸದ್ಯದಲ್ಲೇ ತಿಳಿಸುತ್ತವೇ. ಈ ಮಧ್ಯೆ, ‘ಕೋಟಿಗೊಬ್ಬ 3′ ಟೀಸರ್​ಗೆ ಸ್ವಾಗತ ಮತ್ತು ಶುಭಾಶಯಗಳು’ ಎಂದು ಅನೂಪ್​ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​​ ಸಿಂಗ್​ರದ್ದು ಹತ್ಯೆನಾ?- ಈ ಪ್ರಶ್ನೆಗೆ ಸಿಬಿಐ ಅಧಿಕಾರಿಗಳು ಉತ್ತರಿಸಿದ್ದು ಹೀಗೆ…

    ‘ಫ್ಯಾಂಟಮ್​’ ಚಿತ್ರದಲ್ಲಿ ಸುದೀಪ್​ ಅವರು ವಿಕ್ರಾಂತ್​ ರೋಣ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜತೆಗೆ ಶ್ರದ್ಧಾ ಶ್ರೀನಾಥ್​, ನಿರೂಪ್​ ಭಂಡಾರಿ ಮುಂತಾದವರು ನಟಿಸುತ್ತಿದ್ದಾರೆ. ಜಾಕ್​ ಮಂಜು ನಿರ್ಮಾಣ ಮಾಡುತ್ತಿರುವ ‘ಫ್ಯಾಂಟಮ್​’ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದಾರೆ.

    ಸುದೀಪ್​ ಹುಟ್ಟುಹಬ್ಬಕ್ಕೆ ಯಾರೆಲ್ಲಾ ವಿಶ್​ ಮಾಡಿದ್ದಾರೆ ನೀವೇ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts