

ಇಂದು ಸುದೀಪ್ ಅವರ 47ನೇ ಹುಟ್ಟುಹಬ್ಬ. ಕರೊನಾ ಹಾವಳಿಯಿಂದಾಗಿ ಈ ಬಾರಿ ಮನೆಯ ಹತ್ತಿರ ಬರಬೇಡಿ, ಇದ್ದಲ್ಲೇ ಹಾರೈಸಿ, ನಿಮ್ಮೆಲ್ಲರ ಆರೋಗ್ಯ ಮುಖ್ಯ ... ಎಂದು ಅಭಿಮಾನಿಗಳಿಗೆ ಸುದೀಪ್ ಸಂದೇಶ ರವಾನಿಸಿದ್ದರು. ಅದರಂತೆ ಅಭಿಮಾನಿಗಳು ಇದಲ್ಲೆ ಹಾರೈಸುವುದರ ಜತೆಗೆ, ಹುಟ್ಟುಹಬ್ಬಕ್ಕೆ ಖರ್ಚು ಮಾಡುತ್ತಿದ್ದ ಹಣವನ್ನು ಒಂದಿಷ್ಟು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿದ್ದಾರೆ.
ಈ ಮಧ್ಯೆ, ಚಂದನವನದ ಹಲವು ಸೆಲೆಬ್ರಿಟಿಗಳು ಸುದೀಪ್ ಅವರ ಹುಟ್ಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. ಯಾರ್ಯಾರು ಏನೇನು ಹೇಳಿದ್ದಾರೆ ಎಂಬುದನ್ನು ನೀವೇ ನೋಡಿ ...