ಜಾತಿ ಜನಗಣತಿಯಿಂದ ಯಾರಿಗೂ ಅನ್ಯಾಯವಾಗಲ್ಲ

FotoJet (4)
Published on

ಮಾಜಿ ಶಾಸಕ ಸಂಪಂಗಿ ವಿಶ್ವಾಸ | ಮುಖ್ಯಮಂತ್ರಿಗಳಿಂದ ಸೂಕ್ತ ನಿರ್ಧಾರ

ಬಾಗೇಪಲ್ಲಿ : ಜಾತಿ ಜನಗಣತಿ ವರದಿಯಿಂದ ಯಾವುದೇ ಜನಾಂಗಕ್ಕೆ ಅನ್ಯಾಯ ಆಗದಂತೆ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಒಳಮೀಸಲಾತಿ ಮತ್ತು ಜಾತಿ ಜನಗಣತಿಯಿಂದ ಯಾರಿಗೂ ಅನ್ಯಾಯವಾಗಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಆಗಮಿಸಿದ್ದ ಅವರು ಸ್ವಾಮಿಗೆ ಪೂಜೆ ಸಲ್ಲಿಸಿ ಮಾತನಾಡಿ, ಜಾತಿ ಜನಗಣತಿ ಹಾಗೂ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯಾದ್ಯಂತ ಪರ, ವಿರೋಧದ ಚರ್ಚೆ ನಡೆಯುತ್ತಿದೆ. ಇದು ಸಿಎಂ, ಡಿಸಿಎಂ ಗಮನಕ್ಕೆ ಬಂದಿದೆ. ಆದ್ದರಿಂದ ಜಾತಿ ಜನಗಣತಿ ಕುರಿತು ಸುಧೀರ್ಘ ಚರ್ಚೆಗಳು ನಡೆಯುತ್ತಿವೆ. ಅದೇರೀತಿ ಜಾತಿ ಜನಗಣತಿ ವರದಿಯಲ್ಲಿ ಲೋಪ ಇದೆ ಎಂದು ಕೆಲ ಸಚಿವರು, ಶಾಸಕರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಎಲ್ಲ ಅಂಶಗಳನ್ನು ಪರಿಶೀಲಿಸಿ ಯಾವ ಜನಾಂಗಕ್ಕೂ ಅನ್ಯಾಯ ಆಗದಂತೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಮ್ಮ ಅಶ್ವತ್ಥಪ್ಪ, ಸದಸ್ಯರಾದ ಶಶಿಕಲಾ ನಾರಾಯಣಸ್ವಾಮಿ, ವಿ.ಆದಿನಾರಾಯಣಪ್ಪ, ಭಾಗ್ಯಲಕ್ಷ್ಮೀ ಕೃಷ್ಣಪ್ಪ, ವೆಂಕಟೇಶ್‌ರೆಡ್ಡಿ, ಲಕ್ಷ್ಮೀಶಿವಪ್ಪ, ಗಂಗುಲಮ್ಮ ಅಂಜಿನಪ್ಪ, ಮುಖಂಡರಾದ ಮೂಚಿಚಿನ್ನೆಪಲ್ಲಿ ರಾಮಚಂದ್ರಪ್ಪ, ಗಂಗಿರೆಡ್ಡಿ, ಯರ‌್ರಕಿಟ್ಟಪ್ಪ, ಪ್ರಧಾನ ಆರ್ಚಕ ಲಕ್ಷ್ಮಿನಾರಾಯಣಶಾಸ್ತ್ರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net