

ಚೆನ್ನೈ: ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 26 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಜೈಸನ್ ಫಿಲಿಪ್, ಸರ್ಕಾರದ ಹಿರಿಯ ಸಹಾಯಕ ಶಸ್ತ್ರಚಿಕಿತ್ಸಕರಾಗಿ ಕೆಲಸ ನಿರ್ವಹಿಸಿದ್ದರು ಸಹ ಅಂದು ಏನು ಕೊಡುತ್ತಿದ್ದರೂ ಅದೇ ವೇತನವನ್ನು ಇಂದಿಗೂ ಕೊಡುತ್ತಿದ್ದಾರೆ. ಅದರಲ್ಲಿ ಸ್ವಲ್ಪವು ಹೆಚ್ಚಳವಾಗಿಲ್ಲ ಎಂದಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರಗಳು ತಲೆ ಎತ್ತಿದ್ದು, ಎಗ್ಗಿಲ್ಲದೆ ಸಾಗುತ್ತಿರುವುದರ ಕುರಿತು ಬಹಿರಂಗವಾಗಿ ಆರೋಪ ಎಸಗಿದ್ದಾರೆ.
ಇದನ್ನೂ ಓದಿ: ದಸರಾ ಮಹೋತ್ಸವ ಅರ್ಥಪೂರ್ಣ ಆಚರಿಸೋಣ
ತಮಿಳುನಾಡು ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿರುವ ಮೂತ್ರಶಾಸ್ತ್ರಜ್ಞ ಜೈಸನ್, "ನನ್ನ ಮಾಸಿಕ ಸಂಬಳ 1.29 ರೂ. ಲಕ್ಷವಿದೆ. ಕಳೆದ 26 ವರ್ಷಗಳಿಂದ ವೈದ್ಯನಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ ಸಂಬಳ ಏರಿಕೆಯಾಗಿಲ್ಲ. ಇದು ಏಕೆ ಕಡಿಮೆಯಾಗಿದೆ? ಇಂದಿನ ಕಾಲಘಟಕ್ಕೆ ನನ್ನ ಸಂಬಳ 2 ಲಕ್ಷಕ್ಕೂ ಅಧಿಕ ಇರಬೇಕಿತ್ತು. ಆದರೆ ಆಗಿಲ್ಲ. ಕಳೆದ 10 ವರ್ಷಗಳಿಂದ ನನಗೆ ವೇತನ ಹೆಚ್ಚಾಗಿಲ್ಲ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸಹಾಯಕ ಶಸ್ತ್ರಚಿಕಿತ್ಸಕರಿಗೆ 8 ವರ್ಷ ಸೇವೆ ಸಲ್ಲಿಸಿ ಒಮ್ಮೆ ಬಡ್ತಿ ನೀಡಿದ್ದರೂ ಇಂಕ್ರಿಮೆಂಟ್ ನೀಡಿಲ್ಲ. ಕೆಲಸಕ್ಕಾಗಿ ಲಂಚ ಕೇಳುವ ತಮಿಳುನಾಡು ಆರೋಗ್ಯ ಇಲಾಖೆಯ ಸರ್ಕಾರಿ ಗುಮಾಸ್ತರ ಭ್ರಷ್ಟಾಚಾರವೇ ನನ್ನ ಕಡಿಮೆ ಸಂಬಳಕ್ಕೆ ಕಾರಣ. ಶಸ್ತ್ರಚಿಕಿತ್ಸೆ, ಕಸಿ ಮಾಡುವ ಹಿರಿಯ ವೈದ್ಯರಿಗೆ ಇಂತಹ ಅನ್ಯಾಯವುಂಟಾದಾಗ ಇದು ಸಹಾಯಕ ಶಸ್ತ್ರಚಿಕಿತ್ಸಕರ ನೈತಿಕ ಸ್ಥೈರ್ಯದ ಮೇಲೂ ಪರಿಣಾಮ ಬೀರುತ್ತದೆ. ಆರೋಗ್ಯ ಇಲಾಖೆಯಲ್ಲಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು, ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು" ಎಂದು ಆಗ್ರಹಿಸಿದ್ದಾರೆ,(ಏಜೆನ್ಸೀಸ್).