ನಾಳೆ ಬೇರೆ ಊರುಗಳಿಗೆ ಹೋಗುವ ಯೋಚನೆಯಿದ್ರೆ ಈಗಲೇ ಬಿಟ್ಟು ಬಿಡಿ..!

Untitled design - 2023-08-29T164444.749
Published on

ಬೆಂಗಳೂರು: ನಾಳೆ (ಆಗಸ್ಟ್​ 30) ಬೇರೆ ಊರುಗಳಿಗೆ ಹೋಗುವ ಯೋಚನೆಯಿದ್ದರೆ ಈ ಕೂಡಲೇ ಬಿಟ್ಟು ಬಿಡಿ. ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ನೀವು ತೆರಳಬೇಕಾದ ಸ್ಥಳಕ್ಕೆ ಸಮರ್ಪಕವಾದ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್​ಗಳ ಸೇವೆ ಸಿಗುವುದಿಲ್ಲ.

ಜನಸಾಮಾನ್ಯರು ಬಯಸಿದ ವೇಳೆಗೆ ಸರಿಯಾಗಿ ಬಸ್​ ಸಿಗುವುದು ಅನುಮಾನ. ಇದಕ್ಕೆ ಕಾರಣ ನಾಳೆ ನಡೆಯಲಿರುವ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಜನರನ್ನು ಕರೆದೊಯ್ಯಲು ಸಾವಿರಾರು ಸರ್ಕಾರಿ ಬಸ್​ಗಳನ್ನು ರಾಜ್ಯ ಸರ್ಕಾರ ಈಗಾಗಲೇ ಬುಕ್​ ಮಾಡಿದೆ.

ಮೈಸೂರಿನಲ್ಲಿ‌ ನಡೆಯುವ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್​ಗಳು ಬಳಕೆಯಾಗಲಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ ನಿಗಮಗಳಿಂದ 2000ಕ್ಕೂ ಹೆಚ್ಚು ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ಬಿಎಂಟಿಸಿ ವತಿಯಿಂದ 200ಕ್ಕೂ ಹೆಚ್ಚು ಬಸ್​ಗಳು ಮತ್ತು ಕೆಎಸ್​ಆರ್​ಟಿಸಿಯಿಂದ 1,800 ಕ್ಕೂ ಹೆಚ್ಚು ಬಸ್​ಗಳು ಮೈಸೂರಿನತ್ತ ಪಯಣ ಬೆಳಸಲಿದೆ. ಬೆಂಗಳೂರು, ಮಂಡ್ಯ, ತುಮಕೂರು, ಚಾಮರಾಜನಗರ, ಮೈಸೂರು, ಮಡಿಕೇರಿ, ಹಾಸನ, ಕೋಲಾರ, ಸೇರಿದಂತೆ ಅನೇಕ ಜಿಲ್ಲೆಗಳಿಂದ ಅಧಿಕ ಸಾರಿಗೆ ಬಸ್​ಗಳು ಮೈಸೂರಿಗೆ ಬರಲಿದೆ. ವಾಯುವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ನಿಗಮಗಳಿಂದಲೂ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net