More

    ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

    ಗದಗ: ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಸೋಮವಾರ ಸಾಯಂಕಾಲ ನಗರದ ಕಾಟನ ಸೇಲ್‌ ಸೊಸೈಯಟಿಲ್ಲಿನ ತಮ್ಮ ಕಾರ್ಯಾಲಯದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

    ಸಾರ್ವಜನಿಕರಿಂದ ಶಾಂತ‌ ಚಿತ್ತದಿಂದಲೇ ಅಹವಾಲುಗಳನ್ನು ಸ್ವೀಕರಿಸಿದ ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕೂಡಲೆ ಸಮಸ್ಯೆ ಪರಿಹಾರಕ್ಕಾಗಿ ಕ್ರಮ‌ಕೈಗೊಳ್ಳುವಂತೆ ಸೂಚನೇ ನೀಡಿದರು.

    ಕಲ್ಲೂರ ಗ್ರಾಮದಿಂದ ಗದಗಿಗೆ ಸಮರ್ಪಕ ಬಸ ಸೌಲಭ್ಯ ಒದಗಿಸಲು ವಿಧ್ಯಾರ್ಥಿಗಳ ಮನವಿಗೆ ಸ್ಪಂದಿಸಿದ  ಸಚಿವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕೂಡಲೇ‌ ಸಮಸ್ಯೆ ಪರಿಹರಿಸಲು ಸೂಚನೇ ನೀಡಿದರು.

    ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ, ಸಮಾಜ ಕಲ್ಯಾಣ ಇಲಾಖೆಯಿಂದ‌ ನೀಡಲಾಗುವ ಶಿಷ್ಯ ವೇತನ, ವಸತಿ ಶಾಲೆ ಪ್ರವೇಶಾತಿ, ಗದಗ-ಬೆಟಗೇರಿಯಲ್ಲಿನ ವ್ಯಾಪ್ತಿಯಲ್ಲಿನ ‌ ಸಾರ್ವಜನಿಕರು ಆಶ್ರಯ‌ ಮನೆ ಮಂಜೂರಾತಿ ಕೋರಿ  ಕಂದಾಯ ಇಲಾಖೆ, ಆಹಾರ ಇಲಾಖೆ, ಕಾರ್ಮಿಕ ಇಲಾಖೆ, ಹಿಂದುಲಕಿದ ವರ್ಗಗಳ ಕಲ್ಯಾಣ ಇಲಾಖೆ,  ಶಿಕ್ಷಣ, ಆರೋಗ್ಯ ಇಲಾಖೆಗಳಿಗೆ ಸಂಭಂದಿಸಿದಂತೆ ಸಾರ್ವಜನಿಕರು ನೀಡಿದ ಮನವಿಗಳನ್ನು ಸಚಿವ ಎಚ್.ಕೆ.ಪಾಟೀಲ ಸ್ವೀಕರಿಸಿದರು.

    ಈ ಎಲ್ಲ ಮನವಿಗಳನ್ನು ಆಲಿಸಿ ಕೆಲವುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು. ಮತ್ತೆ ಕೆಲವು ಮನವಿಗಳನ್ನು ಸಂಭಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನೀಡಿ ಪರಿಹಾರ ಮಾಡುವಂತೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ನಿರ್ದೇಶನ ನೀಡಿದರು.

    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜಿನಿಕರು‌, ಗಣ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts