ಪ್ರಧಾನಿ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು; ಸಭಾತ್ಯಾಗ ಮಾಡಿದ ವಿಪಕ್ಷಗಳು

LokSabha
Published on

ನವದೆಹಲಿ: ಮಣಿಪುರದಲ್ಲಿ ಸಂಭವಿಸಿದ ಜನಾಂಗೀಯ ಘರ್ಷಣೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಲೋಕಸಭೆಯಲ್ಲಿ ಸೋಲುಂಟಾಗಿದೆ.

ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಸ್ತಾವನೆಯನ್ನು ಮತಕ್ಕೆ ಹಾಕಲಾಯಿತು. ಧ್ವನಿ ಮತದ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಯಿತು. ಪ್ರಸ್ತಾವನೆಯನ್ನು ಮತಕ್ಕೆ ಹಾಕುವ ಮುನ್ನವೇ ವಿಪಕ್ಷಗಳು ಸಭಾತ್ಯಾಗ ಮಾಡಿದ್ದವು.

ವಿಪಕ್ಷಗಳ ಸಭಾತ್ಯಾಗ ಮಾಡಿದ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರಿಗೆ ಬಹುಶಃ ನನ್ನ ಮಾತುಗಳನ್ನು ಕೇಳಲು ತಾಳ್ಮೆ ಇಲ್ಲ ಎಂದು ಕಾಣುತ್ತದೆ. ಅವರು ಪ್ರತಿಬಾರಿಯೂ ನಮ್ಮ ಮೇಲೆ ಆರೋಪಗಳನ್ನು ಮಾಡಿ ಓಡಿ ಹೋಗುತ್ತಾರೆ. ವಿಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು INDIA ಎಂದು ಬದಲಾಯಿಸಿದ ತಕ್ಷಣ ಅಧಿಕಾರಕ್ಕೇರುತ್ತೇವೆ ಎಂದುಕೊಂಡಿದ್ದಾರೆ.

ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಕುರಿತು ಒಂದೂವರೆ ಘಂಟೆಗಳಿಗು ಹೆಚ್ಚು ಕಾಲ ಸಂಸತ್​ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ INDIA ಮೃತ್ರಿಕೂಟ, ಕಾಂಗ್ರೆಸ್​ ನಾಯಕರಿಗೆ ತಮ್ಮ ಬಾಷಣದುದ್ದಕ್ಕೂ ಚಾಟಿ ಬೀಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net