ನೋ ಬುಕ್ಸ್​, ನೋ ಎಕ್ಸಾಂ... ಶಾಲೆಗೆ ಕಳುಹಿಸದೇ ತಮ್ಮ ಮಕ್ಕಳಿಗೆ ಡಿಫರೆಂಟ್​ ಶಿಕ್ಷಣ ನೀಡುತ್ತಿರುವ ಕುಟುಂಬ! No books, No exams

No books, No exams
Published on

No books, No exams : ಮಕ್ಕಳಿಗೆ ಶಿಕ್ಷಣ ತುಂಬಾ ಮುಖ್ಯ. ಹೀಗಾಗಿ ಬಹುತೇಕ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲೆಂದು ಒಂದೊಳ್ಳೆ ಶಾಲೆಗಳಿಗೆ ಸೇರಿಸುತ್ತಾರೆ. ಚೆನ್ನಾಗಿ ಓದಿ ಜೀವನದಲ್ಲಿ ನೆಲೆ ನಿಲ್ಲಲಿ ಮಕ್ಕಳಿಗಾಗಿ ಶ್ರಮಿಸುತ್ತಾರೆ. ಯಾವುದೇ ಕೆಲಸಗಳು ಸಿಗಬೇಕಾದರೂ ಅದಕ್ಕೆ ವಿದ್ಯಾರ್ಹತೆ ಅನ್ನೋದು ಬೇಕು. ಪದವಿ ಅಥವಾ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳು ಬೇಕಾಗುತ್ತವೆ. ಆದರೆ, ಇಲ್ಲೊಂದು ಕುಟುಂಬ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ವಿಭಿನ್ನ ರೀತಿಯಲ್ಲಿ ಶಿಕ್ಷಣ ನೀಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್​ ವಿಡಿಯೋವನ್ನು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಮತ್ತು ನಟಿ ಶೆನಾಜ್ ಟ್ರೆಷರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊಲ್ಕತ್ತಾದ ಕುಟುಂಬದ ವಿಡಿಯೋ ಬಗ್ಗೆ ಇದೀಗ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮತ್ತು ಅವರಿಗೆ ಶಿಕ್ಷಣ ನೀಡುವುದು ಸಮಯ ವ್ಯರ್ಥ ಎಂದು ಈ ದಂಪತಿ ಹೇಳುತ್ತಾರೆ.

ಇದು 'ಮನೆಶಾಲೆ' ಅಲ್ಲ. ಈ ಹೊಸ ಟ್ರೆಂಡ್​ ಅನ್ನು 'ಶಾಲೆಯಿಂದ ಹೊರಗುಳಿಯುವುದು' ಎಂದು ಕರೆಯಲಾಗುತ್ತದೆ ಎಂದು ದಂಪತಿ ವಾದಿಸುತ್ತಾರೆ. ಶಾಲೆಯಿಂದ ಹೊರಗುಳಿಯುವುದು ಎಂದರೆ ನಿರ್ದಿಷ್ಟ ಪಠ್ಯಕ್ರಮವಿಲ್ಲದೆ ಮಕ್ಕಳಿಗೆ ಅವರು ಇಷ್ಟಪಡುವದನ್ನು ಕಲಿಸುವುದು. ಆದರೆ, ಮನೆಶಾಲೆ ಎಂದರೆ ಮಕ್ಕಳಿಗೆ ಮನೆಯಲ್ಲಿಯೇ ಕಲಿಸುವುದು ಮತ್ತು ನಿಖರವಾದ ಪಠ್ಯಕ್ರಮವನ್ನು ಅನುಸರಿಸುವುದು.

ದಂಪತಿ ತಮ್ಮ ಮಕ್ಕಳಿಗೆ ಕಲಿಸುವ ವಿಧಾನವನ್ನು ಸಹ ವಿವರಿಸಿದ್ದಾರೆ. ಮಕ್ಕಳಿಗೆ ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು, ಪ್ರವಾಸಗಳಿಗೆ ಹೋಗಲು ಮತ್ತು ಮೋಜಿಗಾಗಿ ಹೆಚ್ಚಿನ ಆಟಗಳನ್ನು ಸೇರಿಸಲು ಕಲಿಸುತ್ತಾರೆ. ಅಲ್ಲದೆ, ತಮ್ಮ ಮಕ್ಕಳನ್ನು ಉದ್ಯಮಿಗಳಾಗಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಾವು ಚಿಂತಿಸುತ್ತಿಲ್ಲ ಎಂದು ದಂಪತಿ ಹೇಳಿದ್ದಾರೆ.

ಇನ್ನೂ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಕೆಲವೇ ಜನರು ಮಾತ್ರ ದಂಪತಿಯ ನಿರ್ಧಾರವನ್ನು ಸರಿ ಎಂದಿದ್ದಾರೆ. ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿದ್ದು, ಮಗುವನ್ನು ಶಾಲೆಗೆ ಕಳುಹಿಸುವುದು ಕೇವಲ ಕಲಿಕೆಗೆ ಮಾತ್ರವಲ್ಲ. ಶಾಲೆ ಎಂದರೆ ಒಂದೇ ವಯಸ್ಸಿನ, ವಿಭಿನ್ನ ಮನಸ್ಸಿನ ಮಕ್ಕಳು ಒಟ್ಟಿಗೆ ಸೇರುವ ಸ್ಥಳ. ಅವರು ವರ್ಷಗಳ ಕಾಲ ನಿಕಟವಾಗಿ ಸಂವಹನ ನಡೆಸಿದಾಗ, ಅವರ ನಡವಳಿಕೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುತ್ತವೆ. ನಾನು ಮನೆ ಶಿಕ್ಷಣವನ್ನು ವಿರೋಧಿಸುವುದಿಲ್ಲ. ಆದರೆ ನೀವು ಶಾಲೆಗೆ ಹೋಗಿ ಕಲಿಯಬೇಕು. ಶಾಲೆಯಿಂದ ನೀವು ಪಡೆಯುವ ಅನುಭವಗಳನ್ನು ಬೇರೆಲ್ಲಿಯೂ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net