ಸ್ವಾರ್ಥ ಸಾಧನೆಯಿಂದ ಜೀವನದಲ್ಲಿ ಹಲವು ಸಮಸ್ಯೆಗಳ ಸೃಷ್ಟಿ

nitte
ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ 26ನೇ ವಾರ್ಷಿಕೋತ್ಸವವನ್ನು ಶಿಕ್ಷಣ ತಜ್ಞ ನಾಡೋಜ ಡಾ.ವುಡೇ ಪಿ.ಕೃಷ್ಣ ಉದ್ಘಾಟಿಸಿದರು. ನಿಟ್ಟೆ (ಪರಿಗಣಿತ) ವಿವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ, ಸೂರತ್‌ನ ಬರ್ದೋಲಿ ಶ್ರೀಮದ್ ರಾಮಚಂದ್ರ ಫಿಸಿಯೋಥೆರಪಿ ಕಾಲೇಜಿನ ಪಿಜಿ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ತರ್ಪಣ್ ಎಚ್.ಶಾಹ್ ಮೊದಲಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರತಿಯೊಬ್ಬರಿಗೂ ಸಮಾಜದ ಮೇಲೆ ಋಣವಿದ್ದು ಅದನ್ನು ಮತ್ತೆ ಹಿಂದಿರುಗಿಸುವ ಪ್ರಯತ್ನ ಅಗತ್ಯ. ಸ್ವಾರ್ಥ ಎನ್ನುವುದು ನಮ್ಮ ಜೀವನದಲ್ಲಿ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಶಿಕ್ಷಣ ತಜ್ಞ ನಾಡೋಜ ಡಾ.ವುಡೇ ಪಿ.ಕೃಷ್ಣ ಹೇಳಿದರು.

ನಿಟ್ಟೆ(ಪರಿಗಣಿತ) ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ 26ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸೂರತ್‌ನ ಬರ್ದೋಲಿ ಶ್ರೀಮದ್ ರಾಮಚಂದ್ರ ಫಿಸಿಯೋಥೆರಪಿ ಕಾಲೇಜಿನ ಪಿಜಿ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ತರ್ಪಣ್ ಎಚ್.ಶಾಹ್ ಮಾತನಾಡಿ, ನಿಟ್ಟೆ ಫಿಸಿಯೋಥೆರಪಿ ವಿಭಾಗ ಸಾಮಾನ್ಯ ಕಾಲೇಜು ಅಲ್ಲ, ಇದು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವ ಕೇಂದ್ರ. ಇಲ್ಲಿಗೆ ಉಪನ್ಯಾಸ ನೀಡಲು ಬರುವವರು ಇಲ್ಲಿಂದಲೇ ಹಲವು ವಿಚಾರಗಳನ್ನು ಕಲಿತು ಹೋಗಲು ಸಾಧ್ಯವಾಗುತ್ತದೆ ಎಂದರು.

ಫಿಸಿಯೋಥೆರಪಿ ವಿಭಾಗದ ಹಿರಿಯ ಸಿಬ್ಬಂದಿ ಕಲಾವತಿ ಕೆ., ಜ್ಯೋತಿ ಎನ್. ಹಾಗೂ ಲೀನಾ ವಿ.ರಾವ್ ಅವರನ್ನು ಸನ್ಮಾನಿಸಲಾಯಿತು. ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಐಶ್ವರ್ಯಾ ನಾಯರ್ ಸ್ವಾಗತಿಸಿದರು. ಫಿಸಿಯೋಥೆರಪಿ ವಿಭಾಗ ಪ್ರಾಂಶುಪಾಲ ಪ್ರೊ.ದಾನೇಶ್ ಕುಮಾರ್ ಕೆ.ಯು. ವಾರ್ಷಿಕ ವರದಿ ವಾಚಿಸಿದರು. ರಾಕೇಶ್ ಕುವೆಲ್ಲಾ ಅತಿಥಿಗಳನ್ನು ಪರಿಚಯಿಸಿದರು. ಡಾ.ರಾಕೇಶ್ ಕೃಷ್ಣ ಮತ್ತು ಡಾ.ಪುರುಷೋತ್ತಮ ಚಿಪ್ಪಲ ಸನ್ಮಾನ ಪತ್ರ ವಾಚಿಸಿದರು. ಎನ್‌ಐಪಿಟಿ ಪ್ರಧಾನ ಕಾರ್ಯದರ್ಶಿ ಕಾವ್ಯಾ ಭಟ್ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರುಚಿತ ನರ್ಸಿಯಾ ಸಾಧಕ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಡಾ.ಸೌಮ್ಯಾ ಶ್ರೀವಾತ್ಸವ್ ವಂದಿಸಿದರು. ಡಾ.ನಿಶಿತಾ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಣ ಸಂಸ್ಥೆಗಳು ಹಣ ಸಂಪಾದಿಸುವ ಕೇಂದ್ರ ಅಲ್ಲ, ಜನರಿಗೆ ಸೇವೆ ನೀಡುವ ವ್ಯವಸ್ಥೆ. ಹಣಕ್ಕಿಂತಲೂ ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡುವುದು ಅಗತ್ಯ. ವಿದ್ಯಾರ್ಥಿಗಳು ಕಾಲೇಜಿಗೆ ಸೀಮಿತವಾಗದೆ ಗ್ರಾಮೀಣ ಭಾಗಕ್ಕೆ ಭೇಟಿ ನೀಡಬೇಕು. ನಮ್ಮ ಸಂಸ್ಥೆ ಪ್ರತಿದಿನ 3,500 ರೋಗಿಗಳಿಗೆ ಸೇವೆ ನೀಡುತ್ತಿದ್ದು ಗ್ರಾಮೀಣ ಭಾಗದ ಸಾವಿರ ರೋಗಿಗಳಿಗೆ ಉಚಿತ ಸೇವೆ ನೀಡುತ್ತಿದೆ ಹಾಗೂ ಪ್ರತಿವರ್ಷ ಬಡವರ ಆರೋಗ್ಯಕ್ಕೆ 18 ಕೋಟಿ ರೂ. ಖರ್ಚು ಮಾಡುತ್ತಿದೆ.- ಎನ್.ವಿನಯ್ ಹೆಗ್ಡೆ ಕುಲಾಧಿಪತಿ, ನಿಟ್ಟೆ ವಿವಿ https://www.vijayavani.net/kemminje-pressmeet

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net