ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ

IMG-20240420-WA0005
Published on

ಉಡುಪಿ : ಜನರ ಮನಸ್ಸಿನಲ್ಲಿ ಕನ್ನಡ ಉಳಿಯಬೇಕು ಎಂಬುದು ನಮ್ಮೆಲ್ಲರ ಆಶಯ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನ ವಿಶ್ವವಿದ್ಯಾನಿಲಯಗಳಿಂದ ಆಗುತ್ತಿದೆ. ಕನ್ನಡದ ಅವಸಾನದ ಕ್ರಿಯೆ ನಡೆಯುತ್ತಿದೆ ಎಂದು ಮುಳಿಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಹೇಳಿದರು.

ಶನಿವಾರ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜ್ಯುಕೇಶನ್​ (ಮಾಹೆ) ಆಶ್ರಯದಲ್ಲಿ ಮುಳಿಯತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಡೋಜ ಕೆ.ಪಿ.ರಾವ್​ ಅವರು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್​ ಅವರಿಗೆ ಮುಳಿಯತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರದ್ವಾಜ್​, ಗಮಕ ವ್ಯಾಖ್ಯಾನ ರಂಗಕ್ಕೆ ಪ್ರಾಧ್ಯಾಪಕರು ಬರುತ್ತಿದ್ದಾರೆ. ಪಾಠ ಮಾಡುವ ಕ್ರಮದಲ್ಲಿ ಗಮಕ ವ್ಯಾಖ್ಯಾನ ಸಲ್ಲದು. ಗಮಕದ ಮೂಲಕ ಕಾವ್ಯ ಪರಂಪರೆ ಬಗ್ಗೆ ಯುವಕರಿಗೆ ಆಸಕ್ತಿ ಹುಟ್ಟುವಂತಿರಬೇಕು. ಕಾವ್ಯದ ಬಗ್ಗೆ ಆಸಕ್ತಿ ಇರುವ ನಾವು ಕಾವ್ಯದ ಎಲ್ಲಾ ಸ್ವರೂಪದ ಬಗ್ಗೆ ಅಧ್ಯಯನ ಮಾಡಬೇಕು. ಹೊಸ ಚಿಂತನೆಗಳನ್ನು ವ್ಯಾಖ್ಯಾನಕಾರರು ಮಾಡಬೇಕು. ಶಬ್ದದ ಮೂಲ ಅರ್ಥವನ್ನು ವ್ಯಾಖ್ಯಾನಕಾರರು ಹೇಳಬೇಕು ಎಂದರು.
ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರ ಪ್ರೊ. ಲಕ್ಷಿ$್ಮನಾರಾಯಣ ಕಾರಂತ್​, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಮನೋರಮ ಎಂ.ಭಟ್​, ಮುಳಿಯರ ಪುತ್ರರಾದ ರಾಘವಯ್ಯ ಹಾಗೂ ಗೋಪಾಲಕೃಷ್ಣ ಭಟ್​ ಉಪಸ್ಥಿತರಿದ್ದರು. ಪೂರ್ಣಪ್ರಜ್ಞಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ್​ ಅಳಗೋಡು ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಮುಳಿಯ ಗೋಪಾಲಕೃಷ್ಣ ಭಟ್​ ಬರೆದ ಚಾಣಕ್ಯ ತಂತ್ರ ಪುಸ್ತಕವನ್ನು ನಾ. ದಾಮೋದರ ಶೆಟ್ಟಿ ಬಿಡುಗಡೆಗೊಳಿಸಿದರು. ಮುಳಿಯ ರಾಘವಯ್ಯ ಕೃತಿ ಪರಿಚಯ ಮಾಡಿದರು. ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿನಿ ಮೇಧಾ ಹಾಗೂ ವೈಭವಿ ಪ್ರಾರ್ಥಿಸಿ, ಪ್ರಶಸ್ತಿ ಸಮಿತಿ ಸದಸ್ಯ ಡಾ. ಆರ್​. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net