ಮುಂದಿನ ಪೀಳಿಗೆಗೆ ಹಬ್ಬಗಳ ಮೌಲ್ಯ ಅರಿವು : ಶಕುಂತಲಾ ಶೆಟ್ಟಿ ಅಭಿಪ್ರಾಯ

27
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರಸ್ತುತ ದಿನಗಳಲ್ಲಿ ಪರಂಪರೆಯ ಹಬ್ಬಗಳ ಆಚರಣೆ ಮತ್ತು ಮೌಲ್ಯ ನೆನಪಿಸಿಕೊಳ್ಳುವ ಅಗತ್ಯವಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಹಬ್ಬಗಳು ಮತ್ತು ಮೌಲ್ಯಗಳನ್ನು ತಿಳಿಯಪಡಿಸಬೇಕಿದೆ ಎಂದು ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ.ಶೆಟ್ಟಿ ಹೇಳಿದರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಹಯೋಗದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಬಿಸು ಒಕ್ಕೆಲ್ದ ನೆಂಪು ಕಾರ್ಯಕ್ರಮದಲ್ಲಿ ಬಾಲ್ಯದ ಬಿಸು ಆಚರಣೆ ನೆನಪುಗಳನ್ನು ಹಂಚಿಕೊಂಡರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿ, ಬದಲಾವಣೆಯ ಈ ದಿನಗಳಲ್ಲಿ ಭಾವನೆಗಳು, ಬಾಂಧವ್ಯಗಳು ವ್ಯಕ್ತಿಗತವಾಗಿ ಮುಖ್ಯವಾಗುತ್ತದೆಯಾದರೂ ಪರಿಸ್ಥಿತಿಗೆ ಹೊಂದಿಕೊಂಡು ಬದುಕನ್ನು ಸ್ವೀಕರಿಸಬೇಕಾಗುತ್ತದೆ ಎಂದು ತಿಳಿಸಿದರು.

ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಡಾ.ಸತೀಶ್ ಭಂಡಾರಿ ಬಿಸುಕಣಿ ಇಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ನರರೋಗತಜ್ಞ ಡಾ.ಕೆ.ಆರ್.ಶೆಟ್ಟಿ, ರೂಪಕಲಾ ಆಳ್ವ, ಡಾ.ಜ್ಯೋತಿ ಚೇಳಾಯರು, ಪ್ರೊ.ಸತೀಶ್ ರಾವ್, ಡಾ.ನೇಸರ ಕಾಡನಕುಪ್ಪೆ, ರಾಜಲಕ್ಷ್ಮೀ ಭಂಡಾರಿ, ವರಲಕ್ಷ್ಮೀ ಮಲ್ಲಿ, ರತ್ನಾವತಿ ಜೆ.ಬೈಕಾಡಿ, ಜಯಲಕ್ಷ್ಮೀ, ವಿಜಯಲಕ್ಷ್ಮೀ ಕಟೀಲು, ದೀವಿತ್ ಎಸ್.ಕೆ.ಪೆರಾಡಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕಿ ಡಾ.ಸಾಯಿಗೀತಾ ಹೆಗ್ಡೆ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಯಶೋದಾ ಮೋಹನ್ ವಂದಿಸಿದರು. ದೇವಿಕಾ ನಾಗೇಶ್ ಹಾಗೂ ಸುಖಲಾಕ್ಷಿ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net