

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸನಾತನೀಯ ಚಟುವಟಿಕೆಗಳು ನಡೆಯುತ್ತಿರಬೇಕು. ಧಾರ್ಮಿಕ ಪ್ರಜ್ಞೆ ಮೂಡಿಸುವಂತಹ ಕಾರ್ಯಕ್ರಮಗಳು ನಡೆಸುತ್ತಾ ಮುಂದಿನ ತಲೆಮಾರಿಗೆ ದಾರಿದೀಪವಾಗಬೇಕು ಎಂದು ವಾಗ್ಮಿ ಡಿ.ಎನ್.ಮಣಿಯಾಣಿ ಮಾನ್ಯ ಕಾರ್ಕಳ ಹೇಳಿದರು.
ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ 46ನೇ ವಾರ್ಷಿಕೋತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಮಂದಿರ ಅಧ್ಯಕ್ಷ ಬಾಬು ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ರಾಜೇಶ್ ಪದ್ಮಾರು ಬೆಂಗಳೂರು, ಸಂತೋಷ್ ರೈ ಗಾಡಿಗುಡ್ಡೆ, ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಪಾಣಾಜೆ, ವಿನೋದ್ ಆಚಾರ್ಯ ಪುತ್ತೂರು, ವಸಂತಿ ಅಗಲ್ಪಾಡಿ, ಬಾಬು ಮಣಿಯಾಣಿ ಜಯನಗರ, ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಸುಧಾಮ ಪದ್ಮಾರು, ನಿವೃತ್ತ ಪ್ರೊಫೆಸರ್ ಶ್ರೀನಾಥ್ ಕೊಲ್ಲಂಗಾನ, ದೀಪಕ್ ಬೆದ್ರುಕೂಡ್ಲು ಉಪಸ್ಥಿತರಿದ್ದರು.
ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಅಚ್ಚುತ ಅಗಲ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಅಗಲ್ಪಾಡಿ ವಂದಿಸಿದರು. ಯಾದವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕಲ್ಲಕಟ್ಟ ನಿರೂಪಿಸಿದರು. ಪಾಂಚಜನ್ಯ ಬಾಲಗೋಕುಲದ ಶಿಕ್ಷಕಿ ಲಾವಣ್ಯ ಗಿರೀಶ್ ಪ್ರಾರ್ಥನೆ ಹಾಡಿದರು.
ಭಕ್ತಿಗೀತೆ ಬಿಡುಗಡೆ
ಪ್ರಮುಖರಾದ ನಾರಾಯಣ ಭಟ್ ಕಲ್ಲಕಳಂಬಿ, ಶ್ರೀಧರ ಮಣಿಯಾಣಿ ಮಂಗಳೂರು, ಗಣೇಶ್ ಭಟ್ ಅಳಕ್ಕೆ ನೀರ್ಚಾಲು ಅವರನ್ನು ಸನ್ಮಾನಿಸಲಾಯಿತು. ಅಗಲ್ಪಾಡಿ ಪಾಂಚಜನ್ಯ ಕುಣಿತ ಭಜನಾ ಸಂಘದ ಶಿಕ್ಷಕ ರವಿರಾಜ್ ಏಳ್ಕಾನ, ಭಜನಾ ಸಂಘದ ಶಿಕ್ಷಕಿ ಶಿವಪ್ರಿಯಾ ಅವರನ್ನು ಅಭಿನಂದಿಸಲಾಯಿತು. ಅಗಲ್ಪಾಡಿ ಪುರದೊಡೆಯ ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವೈಷ್ಣವಿ ಎಂ., ವೇದಾಂತ್ ಆರ್.ಪಿ., ದೀಕ್ಷಾ ಯಾದವ್ ಸಿ.ಎಚ್. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ವಾರ್ಷಿಕೋತ್ಸವ ಕಾರ್ಯಕ್ರಮ ತಂತ್ರಿವರ್ಯ ಬಳ್ಳಪದವು ಡಾ.ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಬೆಳಗ್ಗೆ ಮಂದಿರದ ಅಧ್ಯಕ್ಷ ಬಾಬು ಅಗಲ್ಪಾಡಿ ಧ್ವಜಾರೋಹಣಗೈದರು. ಶುದ್ಧಿಕಲಶ, ಗಣಪತಿ ಹೋಮ, ಭಜನೆ, ಚಪ್ಪರ ಮದುವೆ, ತುಳಸೀ ಹಾರ ನೇಯುವ ಸ್ಪರ್ಧೆ, ತುಲಾಭಾರ ಸೇವೆ ನೆರವೇರಿತು. ಪಾತ್ರೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಭಕ್ತಸುದಾಮ ಹರಿಕಥಾ ಸತ್ಸಂಗ, ಪೌರಾಣಿಕ ರಸಪ್ರಶ್ನೆ, ಭಜನೆ, ರಾತ್ರಿ ಮಹಾಪೂಜೆ, ಮಹಾಮಂಗಳಾರತಿ, ಅನ್ನಪ್ರಸಾದ ವಿತರಣೆ, ಸಂಜೆ ನೃತ್ಯವೈವಿಧ್ಯ, ರಾತ್ರಿ ಭಕ್ತಿಗಾನಾಮೃತ ನಡೆಯಿತು.