More

    ಕಾಮಿಡಿ ದಿಲ್ ಪಸಂದ್: ಕೃಷ್ಣನಿಗೆ ಜತೆಯಾದ ನಿಶ್ವಿಕಾ, ಮೇಘಾ

    ಬೆಂಗಳೂರು: ನಟ ‘ಡಾರ್ಲಿಂಗ್’ ಕೃಷ್ಣ ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವುದು ಗೊತ್ತಿರುವ ವಿಚಾರ. ಹೀಗಿರುವಾಗಲೇ ಇತ್ತೀಚೆಗಷ್ಟೇ ಅವರ ಸಿನಿಮಾ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿತ್ತು. ಇದೀಗ ಆ ಚಿತ್ರಕ್ಕೆ ‘ದಿಲ್ ಪಸಂದ್’ ಎಂಬ ಶೀರ್ಷಿಕೆ ಅಂತಿಮ ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಬಿಡುಗಡೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾ ಸಮಾರಂಭದಲ್ಲಿ ಭಾಗವಹಿಸಿದ್ದು, ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.

    ಚಿತ್ರದಲ್ಲಿ ಮೇಘಾ ಶೆಟ್ಟಿ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರಾಗಿ ನಟಿಸುತ್ತಿದ್ದಾರೆ. ಈಗಾಗಲೇ, ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಎಂದೇ ಖ್ಯಾತರಾದ ನಟಿ ಮೇಘಾ, ಗಣೇಶ್ ಜತೆಗಿನ ‘ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಆ ಚಿತ್ರದ ಕೆಲಸ ಮುಗಿಸಿ ಈಗ ಕೃಷ್ಣನ ‘ದಿಲ್ ಪಸಂದ್’ ಚಿತ್ರಕ್ಕೆ ಜತೆಯಾಗಿದ್ದಾರೆ. ಇತ್ತ ನಿಶ್ವಿಕಾ ನಾಯ್ಡು, ‘ಸಖತ್’ ಮತ್ತು ‘ಗುರು ಶಿಷ್ಯರು’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ಏನಿದು ‘ದಿಲ್ ಪಸಂದ್’? ನಿರ್ವಪಕ ಸುಮಂತ್ ಕ್ರಾಂತಿ ಹೇಳುವ ಪ್ರಕಾರ, ‘ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಕಾಮಿಡಿಯ ಅಂಶಗಳೇ ಹೆಚ್ಚಾಗಿರಲಿವೆ. ಕೃಷ್ಣ ಅವರಿಗೆ ಇಲ್ಲಿ ಇಬ್ಬರು ನಾಯಕಿಯರು. ಹಾಸ್ಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ’ ಎನ್ನುತ್ತಾರೆ. ಶಿವತೇಜಸ್ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, ಅ. 4ರಿಂದ ಶೂಟಿಂಗ್ ಶುರುವಾಗಲಿದೆ. ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts