More

    ನೀರವ್​ ಮೋದಿ ದುಬೈಗೆ ಸಾಗಿಸಿದ್ದ 1350 ಕೋಟಿ ರೂ.ಮೌಲ್ಯದ ವಜ್ರ, ಮುತ್ತುಗಳನ್ನು ವಾಪಸ್​ ತಂದ ಇ.ಡಿ.

    ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದ ಆರೋಪಿ, ಆರ್ಥಿಕ ಅಪರಾಧಿ, ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್​ ಚೋಕ್ಸಿ ಅವರು ಕದ್ದುಮುಚ್ಚಿ ದುಬೈಗೆ ಸಾಗಿಸಿದ್ದ ​2,340 ಕೆಜಿ ತೂಕದ, 1350 ಕೋಟಿ ರೂ.ಬೆಲೆಬಾಳುವ ಪಾಲಿಶ್​ ಡೈಮಂಡ್ಸ್​, ಮುತ್ತುಗಳು, ಬೆಳ್ಳಿಯ ಆಭರಣಗಳು ಸೇರಿ ಹಲವು ಜ್ಯುವೆಲರಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತಕ್ಕೆ ವಾಪಸ್ ತಂದಿದ್ದಾರೆ. ಇದನ್ನೂ ಓದಿ:  ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

    ಇ.ಡಿ. ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ. ನೀರವ್​ ಮೋದಿ ಮತ್ತು ಮೆಹುಲ್​ ಚೋಕ್ಸಿ ಅಕ್ರಮವಾಗಿ ಸಾಗಿಸಿದ್ದ ಬೆಲೆಬಾಳುವ ಸರಕುಗಳನ್ನು ಹಾಂಗ್​ಕಾಂಗ್​ನಿಂದ ಮುಂಬೈಗೆ ತರಲಾಗಿದೆ. ಇದೆಲ್ಲವನ್ನೂ ತನಿಖೆ ನಡೆಯುತ್ತಿರುವಾಗಲೇ ದುಬೈಗೆ ಸಾಗಿಸಿದ್ದರು. ಅದನ್ನು ಹಾಂಗ್​ಕಾಂಗ್​ಗೆ ಆಮದು ಮಾಡಿಕೊಂಡು, ಅಲ್ಲಿಂದ ಮುಂಬೈಗೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 2,340 ಕೆಜಿ ತೂಕದ ಬೆಲೆಬಾಳುವ ಸರಕುಗಳ 108 ಪ್ಯಾಕ್​​ಗಳನ್ನು ಹಾಂಗ್​ಕಾಂಗ್​ನ ಲಾಜಿಸ್ಟಿಕ್ಸ್​ ಕಂಪನಿಯ ಗೋಡೌನ್​​ನಲ್ಲಿ ಇಡಲಾಗಿತ್ತು ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ:  ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು

    ನೀರವ್​ ಮೋದಿ ಮತ್ತು ಮೆಹುಲ್​ ಚೋಕ್ಸಿ ಇಬ್ಬರೂ ವಂಚಕ ಉದ್ಯಮಿಗಳಾಗಿದ್ದು, ಅಕ್ರಮ ಹಣ ಸಾಗಣೆ ಪ್ರಕರಣದಡಿ ಇ.ಡಿ.ಯಿಂದ ತನಿಖೆಗೆ ಒಳಪಟ್ಟಿದ್ದಾರೆ. (ಏಜೆನ್ಸೀಸ್​)

    ಪಾಕ್​​ನಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬಂದರೆ ಶಾಕ್​ ಟ್ರೀಟ್​ಮೆಂಟ್​; ಸತ್ತೇ ಹೋದಷ್ಟು ನೋವು ಎಂದ ಶಿಕ್ಷೆಗೊಳಗಾದವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts