More

    ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

    ಮುಂಬೈ: ದೇಶದಲ್ಲಿ ಕರೊನಾ ಸೋಂಕು ಅತಿ ಹೆಚ್ಚಾಗಿ ಬಾಧಿಸಿದ್ದು ಮುಂಬೈನಲ್ಲಿ. ದಿನದಿನಕ್ಕೂ ಅಲ್ಲಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

    ಮುಂಬೈನಲ್ಲಿ ಸೋಂಕಿತರ ಸಂಖ್ಯೆ 90,000ದ ಗಡಿದಾಟಿದ್ದು, ಅದೀಗಲೇ ವೈರಸ್ ಹುಟ್ಟಿದ ದೇಶ ಚೀನಾವನ್ನೂ ಮೀರಿಸಿ, ಮುಂದೆ ಹೋಗಿದೆ. ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆಯೂ ಮಿತಿಮೀರಿದೆ.
    ಮುಂಬೈನಲ್ಲಿ ಹೆಚ್ಚುತ್ತಿರುವ ಕರೊನಾ ಆತಂಕದ ನಡುವೆಯೂ ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಒಂದು ಸಮಾಧಾನಕರ ಸಂಗತಿಯನ್ನು ಹೇಳಿದ್ದಾರೆ.

    ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಶನ್​ನ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಆದಿತ್ಯ ಠಾಕ್ರೆ, ಮುಂಬೈನಲ್ಲಿ ಕೊವಿಡ್​-19ನಿಂದ ಸಾಯುತ್ತಿರುವ ಪ್ರಮಾಣ ಶೇ.3ಕ್ಕೆ ಇಳಿಕೆಯಾಗಿದೆ ಎಂಬ ಒಂದು ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ.

    ಸದ್ಯ ಮುಂಬೈನಲ್ಲಿ ಕೊವಿಡ್​-19ನಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ಶೇ.3ರಷ್ಟಿದೆ. ಇದು ಇಡೀ ದೇಶದ ಒಟ್ಟು ಸಾವಿನ ಪ್ರಮಾಣಕ್ಕೆ ಸರಿಸಮನಾಗಿದೆ. ಹಾಗೇ ಸೋಂಕಿನಿಂದ ಚೇತರಿಸಿಕೊಂಡು, ಡಿಸ್​ಚಾರ್ಜ್​ ಆಗುತ್ತಿರುವವರ ಪ್ರಮಾಣ ಶೇ.42ರಷ್ಟಿದೆ. ಮುಂಬೈನಲ್ಲಿ ಸೋಂಕಿನಿಂದ ವಿಪರೀತ ಬಾಧೆಗೊಳಗಾದ ಧಾರಾವಿಯಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ 42ದಿನಕ್ಕೆ ಏರಿದೆ ಎಂದು ಠಾಕ್ರೆ ಮಾಹಿತಿ ನೀಡಿದ್ದಾರೆ.

    ಮುಂಬೈನಲ್ಲಿ ಒಟ್ಟಾರೆ 24.5ದಿನಗಳಿಗೊಮ್ಮೆ ಸೋಂಕಿನ ಪ್ರಮಾಣ ದ್ವಿಗುಣಗೊಳ್ಳುತ್ತಿದೆ. ಇಡೀ ದೇಶದಲ್ಲಿ ಈ ಪ್ರಮಾಣ 16 ದಿನಗಳಿವೆ ಎಂದು ತಿಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಇದುವರೆಗೆ ಕೊವಿಡ್​-19ನಿಂದ 3,289ಮಂದಿ ಸಾವನ್ನಪ್ಪಿದ್ದಾರೆ. ಅದರ ಮಧ್ಯೆಯೂ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ತುಸು ಸಮಾಧಾನ ತರಿಸಿದೆ.

    ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts