More

    ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು

    ಬೆಂಗಳೂರು: ಲಾಕ್​​ಡೌನ್ ಜಾರಿಯಿಂದಾಗಿ ಬಹುತೇಕ ಕ್ಷೇತ್ರಗಳಿಗೆ ಸಂಕಷ್ಟ ಎದುರಾಗಿದೆ. ಹುಲಿ ಮೀಸಲು ಅಭಯಾರಣ್ಯಗಳೂ ಇದಕ್ಕೆ ಹೊರತಾಗಿಲ್ಲ. ಲಾಕ್​ಡೌನ್ ನಲ್ಲಿ ಬಂಧಿಯಾಗಿದ್ದ ಜಗತ್ತು ಆರ್ಥಿಕ ಪುನಶ್ಚೇತನಕ್ಕೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ.

    ರಾಷ್ಟ್ರೀಯ ಹುಲಿ ಪ್ರಾಧಿಕಾರ ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದರಿಂದ ಹುಲಿ ಅಭಯಾರಣ್ಯಗಳು ಶೀಘ್ರದಲ್ಲೇ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಪಶುವೈದ್ಯಕೀಯ ಮತ್ತು ವನ್ಯಜೀವಿ ತಜ್ಞರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಆದಾಗ್ಯೂ, ರೋಗಲಕ್ಷಣರಹಿತ ಪ್ರವಾಸಿಗರಿಂದಲೂ ಹುಲಿಗಳಿಗೆ ಸೋಂಕು ಹರಡುವುದರ ವಿರುದ್ಧ ಎಚ್ಚರಿಕೆ ಕ್ರಮಗಳು ಮತ್ತು ಸುರಕ್ಷಿತ ಹುಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮುಂಜಾಗೃತಾ ಕ್ರಮಗಳು ಅಗತ್ಯವೆಂದು ತಿಳಿಸಿದ್ದಾರೆ.

    ಇದನ್ನೂ ಓದಿ: ‘ಆ ದಿನಗಳು’ : ಶತಕದ ಸಂಭ್ರಮದಲ್ಲಿರುವ ವಾಯುಪಡೆಯ ಹಿರಿಯ ಸೇನಾನಿಯ ಅವಿಸ್ಮರಣೀಯ ನೆನಪುಗಳೇನು?

    ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಹುಲಿ ಮೀಸಲು ತಾಣಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತಿಳಿಸಿದೆ. ಪ್ರವಾಸಿಗರು, ಚಾಲಕರು ಮತ್ತು ಮಾರ್ಗದರ್ಶಿಗಳ ಥರ್ಮಲ್ ಸ್ಕ್ರೀನಿಂಗ್, ಫೇಸ್ ಮಾಸ್ಕ್ /ಶೀಲ್ಡ್​ ಬಳಕೆ,ಸ್ಯಾನಿಟೈಸರ್ ಬಳಕೆ- ಇವು ಮಾರ್ಗಸೂಚಿಗಳಾಗಿವೆ.

    ಎಲ್ಲ ಹುಲಿ ಅಭಯಾರಣ್ಯಗಳಲ್ಲಿ ನಿರ್ದಿಷ್ಟ ಮಾರ್ಗಸೂಚಿ (ಎಸ್​​ಒಪಿ)ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕರವಸ್ತ್ರಗಳನ್ನು ಹುಲಿ ಅಭಯಾರಣ್ಯಗಳಲ್ಲಿ ಎಸೆದರೆ ಮನುಷ್ಯರಿಂದ ಹುಲಿಗಳಿಗೆ ಸೋಂಕು ಹರಡುವ ಸಾಧ್ಯತೆಗಳಿರುತ್ತದೆ ಎಂದು ವನ್ಯಜೀವಿ ವೈದ್ಯರ (ದಕ್ಷಿಣ ವಿಭಾಗ) ಸಂಘದ ಕಾರ್ಯದರ್ಶಿ ಡಾ. ಎಚ್. ಎಸ್. ಪ್ರಯಾಗ್ ತಿಳಿಸಿದ್ದಾರೆ.

    ಇದನ್ನೂ ಓದಿ: 166 ವರ್ಷಗಳಲ್ಲೇ ಹೊಸ ದಾಖಲೆ ಬರೆದ ಭಾರತೀಯ ರೈಲ್ವೆ ಇಲಾಖೆ

    ಕರವಸ್ತ್ರ, ಟೆಟ್ರಾ ಪ್ಯಾಕ್ ಇತ್ಯಾದಿ ತ್ಯಾಜ್ಯ ಎಸೆಯುವುದನ್ನು ಅಲ್ಲಿ ನಿರ್ಬಂಧಿಸಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ಬಳಸುವಂತೆ ಪಲ್ಸ್ ಆಕ್ಸಿಮೀಟರ್‌ಗಳ ಬಳಕೆ ಮತ್ತೊಂದು ಪ್ರಮುಖ ಸುರಕ್ಷತಾ ಕ್ರಮವಾಗಿದೆ ಎಂದು ಅವರು ಒತ್ತಿ ಹೇಳಿದರು. ಸಫಾರಿ ವಾಹನಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗರು ಆಹಾರ ತರುವುದನ್ನು ನಿಷೇಧಿಸಲಾಗುತ್ತದೆ.

    ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ, ಭದ್ರಾ ಮತ್ತು ಕಾಳಿ – “ಇವು ಕೇವಲ ಹುಲಿ ಅಭಯಾರಣ್ಯಗಳಷ್ಟೇ ಅಲ್ಲ. ಇಲ್ಲಿ ಇತರ ವನ್ಯಜೀವಿಗಳು ಶಾಂತಿಯುತವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ಶೀಘ್ರದಲ್ಲೇ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲ್ಪಡುವ ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಅರಣ್ಯ ಧಾಮ ಕೂಡ ಹುಲಿಗಳಿಗೆ ಶಾಂತಿ ತಾಣವಾಗಿದೆ. ಕರೊನಾವೈರಸ್​​​ನಿಂದಾಗಿ ಎಲ್ಲ ಹುಲಿ ಮೀಸಲು ತಾಣಗಳು ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಈ ಹಿನ್ನೆಲೆ ಹುಲಿ ಪ್ರವಾಸೋದ್ಯಮವನ್ನು ಪುನರಾರಂಭಿಸಬೇಕಾಗಿದೆ “ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಜಾತಿಯ ವಿಷಬೀಜಕ್ಕೆ ಬಲಿಯಾದ ಪ್ರೇಮಿ: ಥಳಿಸಿ ಕೊಂದ ಗ್ರಾಮಸ್ಥರು!

    ಹುಲಿ ನಿಕ್ಷೇಪಗಳಲ್ಲಿ ಕೋವಿಡ್ -19 ಮಾರ್ಗಸೂಚಿಗಳೇನು?
    * ಪ್ರವಾಸಿಗರ ತಾಪಮಾನ ತಪಾಸಣೆ
    * ಹೆಚ್ಚಿನ ತಾಪಮಾನ ಹೊಂದಿರುವ ಪ್ರವಾಸಿಗರನ್ನು ಐಸೋಲೇಷನ್​​ಗೆ ಕಳುಹಿಸುವುದು/ ಸ್ಥಳಾಂತರಿಸುವುದು.
    * ಕಡ್ಡಾಯವಾಗಿ ಫೇಸ್ ಮಾಸ್ಕ್ / ಫೇಸ್ ಶೀಲ್ಡ್, ಸ್ಯಾನಿಟೈಸರ್ ಬಳಕೆ.
    * 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ಅಭಯಾರಣ್ಯದಲ್ಲಿ ಪ್ರವೇಶ ನಿರ್ಭಂದಿಸಲಾಗುತ್ತದೆ.
    * ವಯೋಮಿತಿ ದಾಖಲಾತಿ ಸಲ್ಲಿಕೆ ಕಡ್ಡಾಯ.
    * ವಾಹನ ಆಸನ ಸಾಮರ್ಥ್ಯ 50% ರಷ್ಟು ಕಡಿಮೆ ಇರಬೇಕು.
    * ಹುಲಿ ಮೀಸಲು ತಾಣಗಳಲ್ಲಿ ಒಳಗೆ ಇಳಿಯುವಂತಿಲ್ಲ.

    ದುರಂತ ಬದುಕಿನ ಕುತೂಹಲ ಕಥನ: ಐದು ಕೋಟಿ ಆಸ್ತಿ ಆನೆ ಹೆಸರಿಗೆ ಬರೆದ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts