ಕಾಶ್ಮೀರದಲ್ಲಿ ಕನ್ನಡದ ಆಲ್ಬಂ ಸಾಂಗ್​ 'ನಿನದೇ ನೆನಪು' ...

Ninade Nenapu - Final
Published on

ಬೆಂಗಳೂರು: ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಆಲ್ಬಂ ಹಾಡುಗಳು, ವಿಡಿಯೋ ಸಿಂಗಲ್​ಗಳು ಬಿಡುಗಡೆಯಾಗಿವೆ. ಈ ಪೈಕಿ ವಾಸುಕಿ ವೈಭವ್​ ಹಾಡಿರುವ ಹಾಡಿಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ವಿಶೇವೆಂದರೆ, ಈ ಹಾಡಿನ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್​ನಲ್ಲಿ ನಡೆದಿದೆ. ಕನ್ನಡ ಚಿತ್ರಗಳ ಹಲವು ಹಾಡುಗಳು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿವೆ. ಆದರೆ, ಆಲ್ಬಂ ಹಾಡೊಂದನ್ನು ಅಷ್ಟು ದೂರ ಹೋಗಿ ಚಿತ್ರೀಕರಿಸಿದ್ದು ಕನ್ನಡದಲ್ಲಿ ಇದೇ ಮೊದಲ ಬಾರಿ ಎಂದರೆ ತಪ್ಪಿಲ್ಲ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ.

ಜನಪ್ರಿಯ ಗೀತರಚನೆಕಾರ ಗೌಸ್​ ಪೀರ್​ ಬರೆದಿರುವ, 'ಹೃದಯಕ್ಕೆ ಹೃದಯವೇ ಕಡು ವೈರಿ ...' ಎಂದು ಆರಂಭವಾಗುವ, 'ನಿನದೇ ನೆನಪು' ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿದೆ. ಆಂಜಿ ಬಾಬು ಎಂಬುವವರು ಈ ಹಾಡಿನ ನಿರ್ಮಾಣ ಮಾಡಿದರೆ, ಅವರಿಗೆ ಬೆಂಬಲವಾಗಿ ಫೈಯಿಂಗ್ ಕಿಂಗ್ ಮಂಜು ನಿಂತಿದ್ದಾರೆ. ಮಂಜು, ಈ ಹಿಂದೆ ಮಯೂರ್ ಪಟೇಲ್ ಅಭಿನಯದ 'ರಾಜೀವ' ಚಿತ್ರವನ್ನು ನಿರ್ದೇಶಿಸಿದ್ದರು. ಇನ್ನು, ಈ ಹಾಡನ್ನು ನಿರ್ದೇಶಿಸಿರುವವರು ಎಂ. ವೈ. ಕೃಷ್ಣ.

ವಾಸುಕಿ ವೈಭವ್ ಹಾಡಿರುವ ಈ ಹಾಡಿಗೆ ರೋಹಿತ್ ಸೊವಾರ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net