ಮಲಯಾಳಂ ಚಿತ್ರರಂಗಕ್ಕೆ ಕನ್ನಡದ ಧನಂಜಯ್

Dhananjay
Published on

ಬೆಂಗಳೂರು: ಧನಂಜಯ್ ಕನ್ನಡದ ನಂತರ ತೆಲುಗು ಮತ್ತು ತಮಿಳಿನ ಚಿತ್ರಗಳಲ್ಲಿ ನಟಿಸಿದ ಸುದ್ದಿ ಗೊತ್ತೇ ಇದೆ. ಇದೀಗ ಅವರು ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ‘21 ಹವರ್ಸ್’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಇದರ ಫಸ್ಟ್ ಲುಕ್ ಭಾನುವಾರ ಬಿಡುಗಡೆಯಾಗಿದೆ. ಇಂದು ಧನಂಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅದರ ಅಂಗವಾಗಿ ಫಸ್ಟ್​ಲುಕ್ ಬಿಡುಗಡೆಯಾಗಿದೆ. ಇದರ ಜತೆಗೆ ‘ಹೆಡ್​ಬುಶ್’ ಚಿತ್ರದ ಫಸ್ಟ್​ಲುಕ್ ಟೀಸರ್ ಸಹ ಬಿಡುಗಡೆಯಾಗಿದೆ. ‘21 ಹವರ್ಸ್’ ಚಿತ್ರವನ್ನು ಜಯಶಂಕರ್ ಪಂಡಿತ್ ಎನ್ನುವವರು ನಿರ್ದೇಶಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಜಯಶಂಕರ್, ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ತಮ್ಮ ಮೊದಲ ಚಿತ್ರದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಜಯಶಂಕರ್, ಇದೊಂದು ತನಿಖಾ ಥ್ರಿಲ್ಲರ್ ಚಿತ್ರ. ಬೆಂಗಳೂರಿನಲ್ಲೇ ಫೂರ್ತಿ ಚಿತ್ರೀಕರಣ ಮಾಡಿದ್ದೇವೆ. ಧನಂಜಯ್ ಜತೆಗೆ ಸುದೇವ್ ನಾಯರ್ ಮತ್ತು ರಾಹುಲ್ ಮಹದೇವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ ಕೃಷ್ಣ ಎಂಬ ಮಲಯಾಳಂ ನಟಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ಕೊಡುತ್ತಾರೆ. ಈ ಚಿತ್ರದ ಮೂಲಕ ತಮಿಳು ಮತ್ತು ಹಿಂದಿ ಚಿತ್ರರಂಗದ ಜನಪ್ರಿಯ ಛಾಯಾಗ್ರಹಕರಾದ ತಿರು, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರೂಪರ್ಟ್ ಫರ್ನಾಂಡಿಸ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net