ಅನ್​​ಲಾಕ್​-2: ಇನ್ಮುಂದೆ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಕರ್ಫ್ಯೂ...

Night Curfew
Published on

ಬೆಂಗಳೂರು: ಜು.14ರಿಂದ ಬೆಂಗಳೂರಿನಲ್ಲಿ ಹೇರಲಾಗಿದ್ದ ಲಾಕ್​ಡೌನ್ ನಾಳೆ (ಜು.22) ಮುಂಜಾನೆ 5ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದಿನ ಮಾರ್ಗಸೂಚಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಇಂದು ಸಂಜೆ ಆದೇಶ ಹೊರಡಿಸಿದೆ.

ಕಂಟೇನ್​ಮೆಂಟ್​ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿಯಲಿದ್ದು, ಅದರ ಹೊರತಾದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳ ಪುನರಾರಂಭವಾಗಲಿದೆ ತಿಳಿಸಲಾಗಿದೆ.

ರಾಜ್ಯಾದ್ಯಂತ ನಾಳೆಯಿಂದ ರಾತ್ರಿ 9 ಗಂಟೆಯಿಂದ ಮುಂಜಾನೆ 5ಗಂಟೆವರೆಗೆ ಕರ್ಫ್ಯೂ ಇರಲಿದೆ. ಹಾಗೇ ಪ್ರತಿ ಭಾನುವಾರ ಲಾಕ್​ಡೌನ್​ ಮುಂದುವರಿಯಲಿದೆ. ಹಾಗೇ, ಬೆಂಗಳೂರು ಸೇರಿ ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ ತರಕಾರಿ ಮಾರುಕಟ್ಟೆಗಳನ್ನು ಎಪಿಎಂಸಿ ಅಥವಾ ಸೂಕ್ತವಾದ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು. ಜನಸಂದಣಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಉದ್ಯಾನವನಗಳಲ್ಲಿ ಜಿಮ್​ ಸಾಧನಗಳು ಮತ್ತು ಕುಳಿತುಕೊಳ್ಳುವ ಬೆಂಚ್​​ಗಳ ಬಳಕೆಯನ್ನು ನಿಷೇಧಿಸಲಾಗುವುದು.

ಈ ಮಾರ್ಗಸೂಚಿ ನಿಯಮಗಳು ಜು.31ರವರೆಗೂ ಮುಂದುವರಿಯಲಿವೆ ಎಂದು ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net