ನಿಗಮ-ಮಂಡಳಿ ಹುದ್ದೆ ಇಷ್ಟವಿಲ್ಲವೆಂದ ನಾಲ್ವರು ಶಾಸಕರ ನೇಮಕ ವಾಪಸ್‌

VIDHAN MANDALA
Published on

ಬೆಂಗಳೂರು: ರಾಜ್ಯದ ಎಲ್ಲಾ ನಿಗಮ, ಮಂಡಳಿಗೆ ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡಿ ಸರ್ಕಾರ ಕೆಲ ಗಂಟೆಗಳ ಹಿಂದಷ್ಟೇ ಆದೇಶ ಹೊರಡಿಸಿತ್ತು.

ಆದರೆ ಕೆಲವು ಶಾಸಕರು, ತಮಗೆ ಈ ಸ್ಥಾನ ಬೇಡ ಎಂದು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಕೆಲವು ಶಾಸಕರ ಹೆಸರುಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.

ಸಚಿವ ಆಕಾಂಕ್ಷಿಗಳಾಗಿದ್ದ ಕೆಲವು ಶಾಸಕರನ್ನು ಸಮಾಧಾನಪಡಿಸುವುದಕ್ಕಾಗಿ ಸರ್ಕಾರ ನಿಗಮ-ಮಂಡಳಿಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ ಈ ಬೆನ್ನಲ್ಲೇ ನಾಲ್ಕು ಶಾಸಕರು ತಮಗೆ ಈ ಸ್ಥಾನ ಬೇಡ ಎಂದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೂ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಲ್ಕು ಶಾಸಕರ ಹೆಸರನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ.

ಹುದ್ದೆಯಿಂದ ಹಿಂದೆ ಸರಿದ ಶಾಸಕರು ಇವರು:

ಜಿ. ಎಚ್‌.ತಿಪ್ಪಾರೆಡ್ಡಿ- ಇವರನ್ನು ಡಿ.ದೇವರಾಜ ಅರಸ‌ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಪರಣ್ಣ ಈಶ್ವರಪ್ಪ ಮುನವಳ್ಳಿ- ಒವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಲಾಲಾಜಿ ಆರ‌.ಮೆಂಡನ್‌- ಇವರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಲಾಗಿತ್ತು.

ಬಸವರಾಜ್‌ ದಢೇಸೂರ್‌- ಇವರನ್ನು ಕರ್ನಾರಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರನ್ನಾಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net