ನಿಗಮ- ಮಂಡಳಿಗೆ ಶಾಸಕರ ನೇಮಕ: ಇಲ್ಲಿದೆ ಡಿಟೇಲ್ಸ್‌

BSY
Published on

ಬೆಂಗಳೂರು: ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ 24 ಶಾಸಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಗದೇ ಪಕ್ಷದಲ್ಲಿ ಸ್ವಲ್ಪ ಅಸಮಾಧಾನ ಉಂಟಾಗಿತ್ತು. ಇದೀಗ ಶಾಸಕರಿಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರು ನಿಗಮ-ಮಂಡಳಿಗೆ ಸ್ಥಾನ ನೀಡುವ ಮೂಲಕ ತೃಪ್ತಿಪಡಿಸಿದ್ದಾರೆ.

ಸಂಪೂರ್ಣ ವಿವರ ಇಲ್ಲಿದೆ:

ಆರಗ ಜ್ಞಾನೆಂದ್ರ: ಕರ್ನಾಟಕ ಗೃಹ ಮಂಡಳಿ, ಬೆಂಗಳೂರು

ಎಂ ಚಂದ್ರಪ್ಪ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಬೆಂಗಳೂರು

ನರಸಿಂಹ ನಾಯಕ್:​ ಕರ್ನಾಟಕ ನಗರ ನೀರು ಸರಬಾರಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು

ಎಂ. ಪು. ಕುಮಾರಸ್ವಾಮಿ: ಕರ್ನಾಟಕ ಮಾರುಕಟ್ಟೆ (ಎಂಸಿಎ) ಬೆಂಗಳೂರು

ಎ.ಎಸ್​. ಪಾಟೀಲ್:​ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು

ಎಚ್‌. ಹಾಲಪ್ಪ: ಮೈಸೂರು ಸೇಲ್ಸ್​ ಇಂಟರ್​ ನ್ಯಾಷನಲ್ ಲಿಮಿಟೆಡ್​, ಬೆಂಗಳೂರು

ಮಾಡಳ್​ ವಿರೂಪಾಕ್ಷಪ್ಪ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಬೆಂಗಳೂರು

ಜಿ. ಎಚ್.​ ತಿಪ್ಪಾರೆಡ್ಡಿ: ದೇವರಾಜ ಅರಸ್​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

ಕೆ. ಶಿವನ್​ಗೌಡ ನಾಯಕ್​: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು

ಕಳಕಪ್ಪ ಗುರುಶಾಂತಪ್ಪ ಬಂಡಿ: ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

ಪರಣ್ಣ ಈಶ್ವರಪ್ಪ ಮುನವಳ್ಳಿ: ಕರ್ನಾಟಕ ರಾಜ್ಯ ಹಣಕಾಸು ನಿಗಮ ನಿಯಮಿತ, ಬೆಂಗಳೂರು

ಸಿದ್ದು ಸವದಿ: ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

ಪ್ರೀತಮ್​ ಜಿ ಗೌಡ: ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ, ಬೆಂಗಳೂರು

ರಾಜ್​ಕುಮಾರ್ ಪಾಟೀಲ್​ ತೇಲ್ಕೂರ್​: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ ಸಾರಿಗೆ ಸದನ, ಕಲಬುರಗಿ

ದತ್ತಾತ್ರೇಯ ಚಂದ್ರಶೇಖರ್​ ಪಾಟೀಲ್​ ರೇವೂರ್‌ (ಅಪ್ಪುಗೌಡ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ

ಶಂಕರ್ ಪಾಟೀಲ್​ ಮುನೇನಕೊಪ್ಪ: ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ

ಎಚ್.​ ನಾಗೇಶ್: ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಬೆಂಗಳೂರು

ಎಸ್​​.ವಿ ರಾಮಚಂದ್ರ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಬೆಂಗಳೂರು

ಓಲೆಕಾರ್ ನೆಹರು ಚನ್ನಬಸಪ್ಪ: ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು

ಐಹೊಳೆ ದುರ್ಯೋಧನ ಮಹಾಲಿಂಗಪ್ಪ: ಕರ್ನಾಕಟ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಬೆಂಗಳೂರು

ಲಾಲಾಜಿ ಆರ್.​ ಮೆಂಡನ್​: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು

ಬಸವರಾಜ್​ ದಡೇಸೂರ್​ : ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಬೆಂಗಳೂರು

ಡಾ. ಎಸ್.​ ಶಿವರಾಜ್​ ಪಾಟೀಲ್:​ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು

ಸಿ.ಎಸ್​ ನಿರಂಜನ್​ ಕುಮಾರ್​: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿಯಮಿತ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net