

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಜೀರ್ಣೋದ್ಧಾರ, ಪುನರ್ ನಿರ್ವಾಣಗೊಳ್ಳುತ್ತಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮೇ 30ರಂದು ನಡೆಯಲಿರುವ ಉಪಸ್ಥಾನಾಧಿಪತಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿನ ನಿಧಿಕುಂಭ ಸ್ಥಾಪನೆಗಾಗಿ ಗುರುವಾರ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಭಕ್ತರು ಚಿನ್ನ, ಬೆಳ್ಳಿ, ನವರತ್ನಗಳನ್ನು ಶ್ರೀ ದೇವರಿಗೆ ಅರ್ಪಿಸಿದರು.
ಪಡುಬಿದ್ರಿ ಶ್ರೀ ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯರು ದಾನವಾಗಿ ನೀಡಿದ ಸ್ವರ್ಣ ಲೇಪನದೊಂದಿಗಿನ ಬೆಳ್ಳಿಯ ನಿಧಿಕುಂಭವನ್ನು ಬಾಲಾಲಯದಲ್ಲಿ ಶ್ರೀ ಮಹಾಗಣಪತಿಗೆ ಅರ್ಪಿಸಿದರು. ದೇವಸ್ಥಾನದ ಅರ್ಚಕ ವೈ.ಗುರುರಾಜ ಭಟ್ ಪ್ರಾರ್ಥನೆ ನೆರವೇರಿಸಿದರು. ಸಂಜೆ ವಾಸ್ತು, ನಿಧಿಕುಂಭ ಶುದ್ಧಿ ಮುಂತಾದ ಧಾರ್ಮಿಕ ವಿಧಿಗಳು ಸಂಪನ್ನಗೊಂಡಿತು.
30ರಂದು ಬೆಳಗ್ಗೆ 7.12ಕ್ಕೆ ಶ್ರೀ ಮಹಾಗಣಪತಿ ದೇವರ ನಿಧಿಕುಂಭ ಸ್ಥಾಪನೆಯು ಶ್ರೀ ಪಲಿವಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರುಗಲಿದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಅರ್ಚಕ ಪದ್ಮನಾಭ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ರಾವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ.ಸುಕುವಾರ್, ಉಪಾಧ್ಯಕ್ಷ ರವೀಂದ್ರನಾಥ ಜಿ.ಹೆಗ್ಡೆ, ನವೀನ್‌ಚಂದ್ರ ಜೆ. ಶೆಟ್ಟಿ, ನವೀನ್ ಎನ್.ಶೆಟ್ಟಿ, ಪ್ರಶಾಂತ್ ಶೆಣೈ, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರವಾಕಾಂತ ರಾವ್, ಹರಿಕೃಷ್ಣ ರಾವ್, ಡಾ.ವೈ.ಎನ್.ಶೆಟ್ಟಿ, ಡಾ.ಎನ್.ಟಿ.ಅಂಚನ್, ಸುಚರಿತಾ ಅಂಚನ್, ಪಿ.ಕೆ.ಸದಾನಂದ, ವಿಶುಕುವಾರ್ ಶೆಟ್ಟಿಬಾಲ್, ಗುತ್ತಿನಾರ್ ಕೃಷ್ಣ ಶೆಟ್ಟಿ ಅವರಾಲು, ಬಗ್ಗೇಡಿಗುತ್ತು ಶೇಖರ ಶೆಟ್ಟಿ, ಅನಿಲ್ ಕುವಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೇಟೆಮನೆ, ಸಂಪತ್ ಕುಮಾರ್ ಆಚಾರ್ಯ, ಸುರೇಶ್ ಶೆಟ್ಟಿ ಗುಂಡ್ಲಾಡಿ, ವೈ.ಗೋಪಾಲ ಶೆಟ್ಟಿ, ಮುರಳೀನಾಥ ಶೆಟ್ಟಿ, ಭಾಸ್ಕರ್ ಕೆ., ಸದಾಶಿವ ಪಡುಬಿದ್ರಿ, ಸುಕುವಾರ್ ಶ್ರೀಯಾನ್, ಅಶೋಕ್ ಸಾಲ್ಯಾನ್, ಜಿತೇಂದ್ರ ಶೆಟ್ಟಿ ಬರ್ಪಾಣಿ, ಸುಧಾ ನಾವಡ, ಕಸ್ತೂರಿ ರಾಮಚಂದ್ರ, ಸುಧಾಕರ ಸಾಲ್ಯಾನ್, ಗ್ರಾಮ ಸೀಮೆಯ ಭಕ್ತರು, ದೇವಸ್ಥಾನ ಸಿಬ್ಬಂದಿ ವರ್ಗ ಮತ್ತಿತರರಿದ್ದರು.