ಚಿನ್ನ ಕಳ್ಳಸಾಗಣೆ ಕೇಸ್: ಕೇರಳದ ಐದು ಕಡೆ ಎನ್​ಐಎ ಶೋಧ ಕಾರ್ಯಾಚರಣೆ

NIa Sep 28
Published on

ನವದೆಹಲಿ: ಚಿನ್ನ ಕಳ್ಳಸಾಗಣೆ ಕೇಸ್​ಗೆ ಸಂಬಂಧಿಸಿ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಅಧಿಕಾರಿಗಳು ಕೇರಳದ ಐದು ಕಡೆಗಳಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಸಿತು. ಪ್ರಕರಣದಲ್ಲಿ ಆರೋಪಿಗಳಾಗಿರುವ ಐವರ ಮನೆಗಳಲ್ಲಿ ಈ ಶೋಧ ಕಾರ್ಯ ನಡೆಯಿತು ಎಂದು ಎನ್​ಐಎ ವಕ್ತಾರ ತಿಳಿಸಿದ್ದಾರೆ.

ಮೊಹಮ್ಮದ್​ ಅಸ್ಲಾಂ, ಅಬ್ದುಲ್ ಲತೀಫ್​, ನಜರುದ್ದೀನ್ ಶಾ, ರಮ್​ಝಾನ್​ ಪಿ, ಮುಹಮ್ಮದ್​ ಮನ್ಸೂರ್ ಎಂಬ ಐವರು ಆರೋಪಿಗಳ ಕುರಿತು ಸಂಗ್ರಹಿಸಿ ಮಾಹಿತಿ ಆಧರಿಸಿ ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ಎನ್​ಐಎ ಅಧಿಕಾರಿಗಳು ಅವರ ಮನೆಗಳಲ್ಲಿ ಶೋಧಕಾರ್ಯ ನಡೆಸಿದ್ದರು. ಶೋಧ ಕಾರ್ಯದ ವೇಳೆ ಮನೆಯಿಂದ ಅನೇಕ ಇಲೆಕ್ಟ್ರಾನಿಕ್ ವಸ್ತುಗಳನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯುಎಇ ಕಾನ್ಸುಲೇಟ್ ಜನರಲ್ ಮೂಲಕ ರಾಜತಾಂತ್ರಿಕ ಗೂಡ್ಸ್ ಹೆಸರಿನಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 21 ಆರೋಪಿಗಳನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಜುಲೈ 5ರಂದು 14.82 ಕೋಟಿ ರೂಪಾಯಿ ಮೌಲ್ಯದ 30 ಕಿಲೋ ಚಿನ್ನ ಪತ್ತೆಯಾದ ಪ್ರಕರಣ ಇದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net