

ದೆಹಲಿ: ನಿಜಾಮಾಬಾದ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮಾಸ್ಟರ್ ಮೈಂಡ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ತೆಗೆದುಕೊಂಡಿದೆ.
ಶಸ್ತ್ರ ತರಬೇತುದಾರನಾಗಿದ್ದ ಮೊಹಮದ್ ಯೂನಸ್ನನ್ನು ಎನ್‌ಐಎ ಅಧಿಕಾರಿಗಳು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ತೆಲಂಗಾಣ ಹಾಗೂ ಆಂಧ್ರದಲ್ಲಿ ಕೆಲವು ಯುವಕರಿಗೆ ಶಸ್ತಾಸ್ತ್ರಗಳ ತರಬೇತಿಯನ್ನು ಕೊಡುತ್ತಿದ್ದ ಈತ ಬಳ್ಳಾರಿ ಜಿಲ್ಲೆಯಲ್ಲಿ ವಾಸವಾಗಿದ್ದ.
ಇದನ್ನೂ ಓದಿ: ಭಾರತೀಯರು ಮಾತ್ರ ಬಳಸುವ ಇಂಗ್ಲಿಷ್ನ 10 ಪದಗಳು ಯಾವವು ಗೊತ್ತಾ?
2022ರಲ್ಲಿ ಬಳ್ಳಾರಿಯ ಯೂನಸ್ ಮನೆ ಮೇಲೆ ಎನ್‌ಐಎ ದಾಳಿ ಮಾಡಿತ್ತು. ಈ ವೇಳೆ ಪರಾರಿಯಾಗಿದ್ದ ಯೂನಸ್, ಇಡೀ ಕುಟುಂಬವನ್ನು ತೆಲಂಗಾಣಕ್ಕೆ ಶಿಫ್ಟ್ ಮಾಡಿಸಿದ್ದ. ಅಲ್ಲದೇ, ತೆಲಂಗಾಣದಲ್ಲಿ ಹೆಸರು ಬದಲಿಸಿಕೊಂಡು ವಾಸವಾಗಿದ್ದನು.
ಬಶೀರ್ ಎಂದು ಹೆಸರು ಬದಲಾಯಿಸಿ ಫ್ಲಂಬರ್ ಕೆಲಸ ಮಾಡುತ್ತಿದ್ದ ಯೂನಸ್ ತೆಲಂಗಾಣ ಹಾಗೂ ಆಂಧ್ರ ಟ್ರೈನರ್ಗಳಿಗೆ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದ ಈತ ನಿಜಾಮಾಬಾದ್ ಪಿಎಫ್ಐ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿದ್ದನು.
ಈ ಕೇಸ್ನ್ನು ತೆಲಂಗಾಣ ಪೊಲೀಸರು ಕೇಸ್ ದಾಖಲಿಸಿ ಎನ್‌ಐಎ ವರ್ಗಾವಣೆ ಮಾಡಿದ್ದರು. ಸದ್ಯ ಮೊಹಮದ್ ಯೂನಸ್ನನ್ನು ಬಂಧಿಸಿ ವಿಚಾರಣೆ ಮಾಡುತ್ತಿರುವ ಎನ್‌ಐಎ ಯೂನಸ್ ಜೊತೆಯಿದ್ದ ಇಲಿಯಾಸ್ಗಾಗಿ ಹುಡುಕಾಡುತ್ತಿದೆ.(ಏಜೆನ್ಸೀಸ್)