ಹೋಬಳಿ ಕೇಂದ್ರಗಳಲ್ಲಿ ಸ್ವಾತಂತ್ರೃ ದಿನ ಆಚರಣೆ

16 KRN-2
ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ ಮಾರಿಗುಡಿಕೊಪ್ಪಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕರ್ನಾಟಕ ಕೃಷಿಕರ ಸಂಘದ ವತಿಯಿಂದ ಸ್ವಾತಂತ್ರೃ ದಿನ ಆಚರಿಸಲಾಯಿತು. ಕೆ.ಆರ್.ಕುಮಾರ್, ಬಿ.ಕೆ.ನೂತನಕುಮಾರ್, ವೆಂಕಟೇಶ್, ಪ್ರಸನ್ನಕುಮಾರ್, ಸಿದ್ದೇಗೌಡ ಇದ್ದರು.
Published on

ಕೆ.ಆರ್.ನಗರ: ತಾಲೂಕಿನ ಕಾಳೇನಹಳ್ಳಿ ಮಾರಿಗುಡಿಕೊಪ್ಪಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಮಂಗಳವಾರ ಕರ್ನಾಟಕ ಕೃಷಿಕರ ಸಂಘದ ವತಿಯಿಂದ 77ನೇ ಸ್ವಾತಂತ್ರೃ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ಕೆ.ಆರ್.ಕುಮಾರ್ ಬೋವಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಭೋವಿ ಮಾತನಾಡಿ, ಕೃಷಿಕರು ಪ್ರತಿ ವರ್ಷ ಧ್ವಜಾರೋಹಣ ಮಾಡಬೇಕು, ಸ್ವಾತಂತ್ರೃ ದಿನದ ಉದ್ದೇಶ ರೈತರಿಗೆ ತಿಳಿಯಬೇಕೆೆಂಬ ಉದ್ದೇಶದಿಂದ ಕೃಷಿ ಜಮೀನಿನಲ್ಲಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ನೂತನಕುಮಾರ್ ಮಾತನಾಡಿದರು. ಗೌರವಾಧ್ಯಕ್ಷ ವೆಂಕಟೇಶ್, ಕೆ.ಆರ್.ನಗರ ತಾಲೂಕು ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಸಿದ್ದೇಗೌಡ, ಸದಸ್ಯರಾದ ಮಾದೇಗೌಡ, ಕೆಂಪಣ್ಣ, ಕಲ್ಲಹಳ್ಳಿ ಸ್ವಾಮೀಗೌಡ, ಅರಕಲಗೂಡು ತಾಲೂಕು ಅಧ್ಯಕ್ಷ ಸೋಮಶೇಖರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಶಂಭುಲಿಂಗಪ್ಪ, ಸದಸ್ಯ ತಮ್ಮರಸು, ಹೊಸೂರು ಕಲ್ಲಹಳ್ಳಿ ಘಟಕದ ಉಪಾಧ್ಯಕ್ಷ ಶಿವಣ್ಣ, ಸದ್ಯರಾದ ಹಳ್ಳದಕೊಪ್ಪಲು ಮಲ್ಲೇಗೌಡ, ಅಣೇಗೌಡ, ಗಿರಿಜಮ್ಮ, ಮಹದೇವಪ್ಪ, ಮಾರಿಗುಡಿಕೊಪ್ಪಲು ರಾಮೇಗೌಡ, ಹುಣಸೂರು ಮಹದೇವಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net