ಹೊಸ ಬೆಳಕು ತಂಡದ 50ನೇ ಸಂಚಿಕೆಯ ಗಾಯನ ಕಾರ್ಯಕ್ರಮ

Music _1
Published on

ಹೊಸ ಬೆಳಕು ತಂಡದ 50ನೇ ಸಂಚಿಕೆಯ ಗಾಯನ ಕಾರ್ಯಕ್ರಮದ ಅಂಗವಾಗಿ ಜೂನ್ 8 ರಂದು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ನಗರದ ಪುರಭವನದಲ್ಲಿ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲಕಿ ಉಷಾ ಸುಧಾಕರ್ ತಿಳಿಸಿದರು.

ಕನ್ನಡ, ಹಿಂದಿ ಮೊದಲಾದ ಭಾಷೆಗಳ ಚಲನಚಿತ್ರ ಗೀತೆಗಳನ್ನು ಇದುವರೆಗೆ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಹಾಡಿದ ಸುಮಾರು 50 ಜನರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಒಟ್ಟು 80 ಗೀತೆಗಳನ್ನು ಹಾಡಲಾಗುವುದು. 30 ಜನ ಗಾಯಕರು, 25 ಮಂದಿ ಗಾಯಕಿಯರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಲಕ್ಕಿಡಿಪ್‌ನಲ್ಲಿ ಆಯ್ಕೆಯಾದ ಗಾಯಕಿಯರಿಗೆ ಒಂದು ಚಿನ್ನದ ಆಭರಣ ಬಹುಮಾನ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಯಕರಾದ ಜಯಲಕ್ಷ್ಮೀ, ರಾಧಿಕಾ, ರಮೇಶ್, ಶಿವಕುಮಾರ್, ರೂಪಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net