ಹೊದಲಿ ಕೆರೆ ಅಂಗಳದಲ್ಲಿ ಕೋಟಿ ರೂ.ಗಳಿಗೂ ಬೆಲೆ ಬಾಳುವ ಅಕೇಶಿಯ ಮರಗಳು ಕಳ್ಳಕಾಕರ ಪಾಲು / ಹರಾಜು ಪ್ರಕ್ರಿಯೆ ನಡೆಸಲು ಗ್ರಾಮಸ್ಥರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
ಗ್ರಾಮ ಪಂಚಾಯ್ತಿ ಮತ್ತು ಅರಣ್ಯ ಅಧಿಕಾರಿಗಳು ನಿರ್ಲಕ್ಷö್ಯತನದಿಂದಾಗಿ ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವ ಅಕೇಶಿಯ ಮರಗಳು ಒಂದು ಕಡೆ ಕಳ್ಳರ ಪಾಲಾಗುತ್ತಿದ್ದರೆ ಮತ್ತೊಂದು ಕಡೆ ಗಾಳಿ ಮಳೆಗೆ ಮರಗಳು ಕೆಳಕ್ಕೆ ಉರುಳಿ ಸರ್ಕಾರಕ್ಕೆ ಬರಬೇಕಾಗಿದ್ದ ಕೋಟಿ ರೂ.ಗಳು ದಿನೇ ದಿನೇ ಕುಸಿಯತೊಡಗಿದರು ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯ್ತಿ ಹೊದಲಿ ಗ್ರಾಮಕ್ಕೆ ಸೇರಿದ ೧೮೦ ಎಕೆರೆ ಕೆರೆ ಅಂಗಳದಲ್ಲಿ ಅಕೇಶಿಯ ಮರಗಳನ್ನು ಬೆಳೆಯಲಾಗಿದ್ದು, ಈಗಾಗಲೇ ಮರಗಳು ಕಟಾವಿಗೆ ಬಂದಿದ್ದು, ಅರಣ್ಯ ಮತ್ತು ಗ್ರಾಮ ಪಂಚಾಯ್ತಿ ನಿರ್ಲಕ್ಷö್ಯದಿಂದ ಮರಗಳು ರಾತ್ರೋರಾತ್ರಿ ಕಳ್ಳತನವಾಗುತ್ತಿದ್ದರು. ಮತ್ತೊಂದು ಕಡೆ ಬೆಳೆದು ನಿಂತಿರುವ ದೊಡ್ಡ ಗಾತ್ರದ ಮರಗಳು ಗಾಳಿ ಮಳೆಗೆ ಮುರಿದು ಬಿದ್ದು, ಗ್ರಾಮಸ್ಥರ ಪಾಲಾಗುತ್ತಿವೆ.

ಗ್ರಾಮಪಂಚಾಯ್ತಿ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಜಂಟಿಯಾಗಿ ೧೯೯೮ರಲ್ಲಿ ಹೊದಲಿ ಕೆರೆ ಅಂಗಳದಲ್ಲಿ ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಬೆಳೆಸಿದರು. ಇದಕ್ಕೆ ಗ್ರಾಮ ಅರಣ್ಯ ಸಮಿತಿಯೆಂದು ನಾಮಕರಣ ಮಾಡಿ, ಹೊದಲಿ ಗ್ರಾಮ ಪಂಚಾಯ್ತಿಯ ಸುರ್ಪತ್ತಿಗೆ ನೀಡಲಾಗಿತ್ತು. ಇದರ ಸಂರಕ್ಷಣೆ ಪಂಚಾಯ್ತಿ ವತಿಯಿಂದ ಕಾವಲುಗಾರರನ್ನು ನೇಮಕ ಮಾಡಿ, ಮರಗಳು ಕಟಾವಿನಿಂದ ಬಂದ ಹಣದಲ್ಲಿ ಶೇ.೫೦ ರಷ್ಟು ಅರಣ್ಯ ಹಾಗೂ ಶೇ.೫೦ ಗ್ರಾಮ ಪಂಚಾಯ್ತಿಗೆ ಹಣ ನೀಡುವಂತೆ ಒಪ್ಪಂದವಾಗಿತ್ತು.

ಕಳೆದ ೨ ವರ್ಷಗಳ ಹಿಂದೆ ನೀಲಗಿರಿ ಮರಗಳನ್ನು ಟೆಂಡರ್ ಮೂಲಕ ಕಟಾವು ಮಾಡಲಾಗಿದೆ. ಅಕೇಶಿಯ ಮರಗಳನ್ನು ಹಾಗಿಯೇ ಬಿಡಲಾಗಿತ್ತು. ನೀಲಗಿರಿ ಮರಗಳು ಕಟಾವು ಆಗುತ್ತಿದ್ದಂತೆ ಸೈಜಿಗೆ ಬಂದಿರುವ ಅಕೇಶಿಯ ಮರಗಳನ್ನು ರಾತ್ರಿ ವೇಳೆ ಕಳ್ಳರು ಕಟಾವು ಮಾಡುತ್ತಿದ್ದರು ಸಂಬಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇರುವ ಮರಗಳು ಕಳ್ಳತನವಾಗುವ ಸಾಧ್ಯತೆ ಇದೆ. ಹಾಗೂ ಸೈಜಿಗೆ ಬಂದಿರುವ ಮರಗಳು ಗಾಳಿ ಮಳೆಗೆ ಮುರಿದು ಬೀಳುತ್ತಿವೆ. ಬಿದ್ದ ಮರಗಳನ್ನು ಕಳ್ಳಕಾಕರ ಪಾಲಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಬಾಕ್ಸ್
ಅಕೇಶಿಯ ಮರಗಳನ್ನು ಉರುವಲಿಗೆ ಬಳಸಲು ಮಾತ್ರ ಸೀಮಿತ ಎಂದು ಅರಣ್ಯ ಇಲಾಖೆ ದೃಢೀಕರಿಸಿದೆ. ಆದರೆ ಅಕೇಶಿಯ ಮರಗಳು ಮನೆಯ ಬಳಕೆ ಸಾಮಗ್ರಿಗಳಿಗೆ ಸೇರಿದಂತೆ ಕಿಟಕಿ ಬಾಗಿಲುಗಳಿಗೂ ಸಹ ಇತ್ತೀಚೆಗೆ ಬಳಸುತ್ತಿರುವುದರಿಂದ ಅಕೇಶಿಯ ಮರಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಸೋಫಾ ಸೆಟ್ಟು, ಡೈನಿಂಗ್ ಟೇಬಲ್ ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳಾಗಿ ಈ ಮರಗಳನ್ನು ಮಾಧ್ಯಮ ವರ್ಗದವರು ಬಳಸುವುದು ಇತ್ತೀಚೆಗೆ ಹೆಚ್ಚಾಗಿದೆ. ಬಡವರ ಮನೆ ನಿರ್ಮಾಣಕ್ಕೆ ಬಡವರ ಪಾಲಿಗೆ ಈ ಅಕೇಶಿಯ ಮರ ಹೊನ್ನೆ, ಟೀಕು, ಬೀಟೆ ಮರಗಳನ್ನು ಖರೀದಿಸಲು ಸಾಧ್ಯವಾಗದೇ ಇರುವವರು ಈ ಮರಗಳನ್ನು ಬಳಸುವುದು ಹೆಚ್ಚಾಗಿರುವುದರಿಂದ ಅಕೇಶಿಯ ಮರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.

ಕೋಟ್
ನೀಲಗಿರಿ ಮರಗಳು ಕಟಾವು ಮಾಡಿರುವ ಅಕೇಶಿಯ ಮರಗಳನ್ನು ಹಾಗಿಯೇ ಬಿಟ್ಟಿದ್ದಾರೆ. ಪಂಚಾಯ್ತಿಯಿAದ ನೇಮಕ ಮಾಡಿರುವ ಕಾವಲುಗಾರ ಹಿಡಿತ ತಪ್ಪಿದ್ದು, ಇರುವ ಮರಗಳು ದಿನೇದಿನೇ ಒಂದು ಕಡೆ ಕಳುವಾಗುತ್ತಿದ್ದರೆ ಮತ್ತೊಂದು ಕಡೆ ಗಾಳಿ ಮಳೆಗೆ ಮುರಿದು ಬೀಳುತ್ತಿರುವುದರಿಂದ ಹಗಲು ಸಮಯದಲ್ಲಿ ಅವುಗಳನ್ನು ಕಡಿದು ಸೌಧೆ ಮಾರುವವರು ಹಾಗೂ ಸಾಮಗ್ರಿಗಳಾಗಿ ಬಳಸುವವರು ಸಾಗಿಸುತ್ತಿದ್ದಾರೆ. ಗ್ರಾಮಸ್ಥರೇ ಅನೇಕ ಬಾರಿ ಅಂಥಹವರನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿ ಅರಣ್ಯದವರಿಗೆ ಮತ್ತು ಗ್ರಾಮಪಂಚಾಯ್ತಿಗೆ ತಿಳಿಸಿದ್ದರು ಅಲ್ಲಿನ ಅಧಿಕಾರಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ನಡೆಸಿದರೆ ಸರ್ಕಾರಕ್ಕೆ ಕೋಟಿ ರೂ.ಗಳಿಗೂ ಹೆಚ್ಚು ಹಣ ಬರುತ್ತದೆ. ಅದರಲ್ಲಿ ಅರ್ಧದಷ್ಟು ಹಣ ಪಂಚಾಯ್ತಿಗೆ ಬಂದರೆ ಪಂಚಾಯ್ತಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಾಧ್ಯವಾಗುತ್ತದೆ.

-ಅಪ್ಪಿರೆಡ್ಡಿ, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರು. ಹೊದಲಿ ಗ್ರಾಮಸ್ಥರು.

ಕೋಟ್
ಹೊದಲಿ ಕೆರೆಯಲ್ಲಿ ಬೆಳೆದಿರುವ ಅಕೇಶಿಯ ಮರಗಳು ಸಾಮಾಜಿಕ ಅರಣ್ಯ ಇಲಾಖೆಯ ಹೊಲಯ ಅರಣ್ಯ ಅಧಿಕಾರಿ ರವಿಕೀರ್ತಿ ಗಮನಕ್ಕೆ ತರಲಾಗಿದೆ. ಹರಾಜು ಪ್ರಕ್ರಿಯೆ ನಡೆಸಬೇಕಾದರೆ ಮರಗಳ ಸಂಖ್ಯೆ ಮತ್ತು ಗಾತ್ರ ಉದ್ದ ಅಳತೆ ಬೇಕಾಗುತ್ತದೆ. ಸಿಬ್ಬಂದಿಯ ಕೊರತೆ ಇದ್ದರೆ ನಿಯಮಿತ ಅರಣ್ಯ ಇಲಾಖೆಯಿಂದ ಸಿಬ್ಬಂದಿಯನ್ನು ಪಡೆದು ಹಾರಜು ಪ್ರಕ್ರಿಯೆಗಾಗಿ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ. ೧೫ ದಿನಗಳ ಒಳಗಾಗಿ ಹಾರಾಜು ಪ್ರಕ್ರಿಯೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ಏಡುಕೊಂಡಲ, ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ.

ಚಿತ್ರ ೦೩ ಕೆ.ಎಲ್.ಆರ್. ೦೨ : ಗಾಳಿ ಮಳೆಗೆ ಮುರಿದು ಬಿದ್ದಿರುವ ಅಕೇಶಿಯ ಮರಗಳು
ಚಿತ್ರ ೦೩ ಕೆ.ಎಲ್.ಆರ್. ೦೨ : ಏಡುಕೊಂಡಲ, ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net